ನಟ ವಿನೋದ್ ರಾಜ್ ಗೆ ಯಾಮಾರಿಸಿದ್ದ ಕಳ್ಳನ ಬಂಧನ

ಶುಕ್ರವಾರ, 9 ನವೆಂಬರ್ 2018 (17:19 IST)
ನಟ ವಿನೋದ್ ರಾಜ್ ಗೆ ಯಮಾರಿಸಿ ಒಂದು ಲಕ್ಷ ದರೋಡೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಖತರ್ನಾಕ್ ಕಳ್ಳನ ಬಂಧನವಾಗಿದೆ.

ಅಭಿಮಾನಿ ಸೋಗಿನಲ್ಲಿ ಬಂದು ದರೋಡೆ ಮಾಡಿದ್ದ ಕಳ್ಳ. ಓಜಿಕುಪ್ಪಂ ಮೂಲದ ರಾಜು @ ಹೈಟೇಕ್ ರಾಜ ಬಂಧನವಾಗಿರುವ ಆರೋಪಿಯಾಗಿದ್ದಾನೆ.

ಒಂದು ತಿಂಗಳ ಹಿಂದೆ ನೆಲಮಂಗಲ ಪಟ್ಟಣದಲ್ಲಿ ನಡೆದ ಪ್ರಕರಣ ಇದಾಗಿದೆ. ಪೊಲೀಸರು ಕಾರ್ಯಾಚರಣೆ ಮೂಲಕ ಆರೋಪಿ ವಶ ಪಡೆದುಕೊಂಡಿದ್ದಾರೆ.

ಆರೋಪಿ ಹೈಟೆಕ್ ರಾಜ ಕದ್ದ ಹಣದಲ್ಲಿ ಐಶಾರಾಮಿ ಜೀವನ ನಡೆಸುತ್ತಿದ್ದನು. ಬಗೆ ಬಗೆಯ ಹೈ ಬ್ರಾಂಡ್ ಬಟ್ಟೆ, ಶೂ, ಗಾಗಲ್ ನೊಂದಿಗೆ ಶೋಕಿ ಮಾಡುತ್ತಿದ್ದನು. ಸಿಪಿಐ ಅನಿಲ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
ನೆಲಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಟಿಪ್ಪು ಜಯಂತಿಗೂ ಬಿಜೆಪಿಗೂ ಯಾವದೇ ಸಂಬಂಧವಿಲ್ಲ ಎಂದ ಮುಖಂಡ