Publish Date: Sun, 31 May 2020 (15:00 IST)
Updated Date: Sun, 31 May 2020 (15:02 IST)
ರಾಜ್ಯ ರಾಜಕೀಯದಲ್ಲಿ ಒಂದಷ್ಟು ದಿನ ಕೊರೊನಾ ವೈರಸ್ ನಿಂದಾಗಿ ತಣ್ಣಗಾದಂತಿದ್ದ ರಾಜಕೀಯ ಚಟುವಟಿಕೆಗಳು ಮತ್ತೆ ಶುರುವಾಗಿವೆ.
ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರರ ವಿರುದ್ಧ ಬಿಜೆಪಿ ಶಾಸಕರು ಗುಪ್ತ ಸಭೆ ನಡೆಸಿ ಅಸಮಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.
ಶಾಸಕರ ಕೆಲಸಗಳಿಗೆ ವಿಜಯೇಂದ್ರರನ್ನು ಭೇಟಿ ಮಾಡುವ ಪರಿಸ್ಥಿತಿ ಇದೆ, ಸಿಎಂ ಕಾರ್ಯವೈಖರಿ ಚೆನ್ನಾಗಿಲ್ಲ ಎಂದು ಬಂಡಾಯದ ಸಭೆಯಲ್ಲಿ ಪಾಲ್ಗೊಂಡಿದ್ದ ಒಂದಷ್ಟು ಶಾಸಕರು ಆಕ್ರೋಶ ಹೊರಹಾಕಿದ್ದಾರೆ ಎನ್ನಲಾಗಿದೆ.
ಕಮಲ ಪಾಳೆಯದ ಆಂತರಿಕ ರಾಜಕೀಯ ಕಚ್ಚಾಟದ ವಿಷಯ ಹೈಕಮಾಂಡ್ ಗಮನಕ್ಕೂ ಹೋಗಿ ತಲುಪಿದೆ. ಮುಂದೆ ಇದು ಯಾವ ಹಂತಕ್ಕೆ ಹೋಗಲಿದೆ ಅನ್ನೋದು ಸಧ್ಯದ ಕುತೂಹಲ.