Publish Date: Tue, 05 May 2020 (10:02 IST)
Updated Date: Tue, 05 May 2020 (10:03 IST)
ಬೆಂಗಳೂರು : ಕೊರೊನಾ ವಿಷಯದಲ್ಲೂ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ವ್ಯಂಗ್ಯವಾಡಿದ್ದಾರೆ.
“ಕಾಂಗ್ರೆಸ್ ನವು ಕಾರ್ಮಿಕರ ಬಸ್ ಚಾರ್ಜ್ , ಟ್ರೈನ್ ಚಾರ್ಜ್ ಕೊಡ್ತೀವಿ ಎಂದು ರಾಜಕೀಯ ಮಾಡುತ್ತಿದ್ದಾರೆ. ಈ ಬಗ್ಗೆ ಜಾಹೀರಾತನ್ನೂ ಸಹ ಕೊಟ್ಟಿದ್ದಾರೆ. ಜಾಹೀರಾತು ನೋಡಿದ್ರೆ ಇದು ಬಯಲುನಾಟಕ ಎಂದೆನಿಸುತ್ತದೆ. ಯಾರಿಗೆ ಕೊಡಬೇಕೋ ಅವರಿಗೆ ಹಣ ಕೊಡಲಿ. ಅದು ಬಿಟ್ಟು ಊರೆಲ್ಲಾ ಓಡಾಟ, ಚೀರಾಟ ಬೇಡ. ಕೊರೊನಾ ವಿಷಯದಲ್ಲೂ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ” ಎಂದು ಟ್ವೀಟರ್ ನಲ್ಲಿ ಸಚಿವ ಡಾ.ಸುಧಾಕರ್ ಕಿಡಿಕಾರಿದ್ದಾರೆ.