ಬಿಜೆಪಿಯಲ್ಲಿ ಬಂಡಾಯ; ಇಂದು 11 ಗಂಟೆಗೆ ತುರ್ತು ಸಭೆ ಕರೆದ ಸಿಎಂ

ಶುಕ್ರವಾರ, 29 ಮೇ 2020 (09:39 IST)
ಬೆಂಗಳೂರು : ಕೊರೊನಾ ಭೀತಿಯ ನಡುವೆ ಇದೀಗ ಬಿಜೆಪಿಯಲ್ಲಿ ಬಂಡಾಯ ಭುಗಿಲೆದಿದ್ದು, ಈ ಹಿನ್ನಲೆಯಲ್ಲಿ ಇಂದು ಸಿಎಂ ತುರ್ತು ಸಭೆ ಕರೆದಿದ್ದಾರೆ.


ಬಿಜೆಪಿ ನಾಯಕರಾದ ಉಮೇಶ್ ಕತ್ತಿ, ಮುರಗೇಶ್ ನಿರಾಣಿ ಮತ್ತು ಬಸನಗೌಡ ಪಾಟೀಲ್  ಸಿಎಂ ವಿರುದ್ಧ ಸಂಚು ರೂಪಿಸಿ ಸಭೆ ನಡೆಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸಿಎಂ ಬಿಎಸ್ ವೈ ಉಮೇಶ್ ಕತ್ತಿ ಹಾಗೂ ನಿರಾಣಿ ಅವರಿಗೆ ಫೋನ್ ಮಾಡಿ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.


ಅಲ್ಲದೇ ಶಾಸಕರು ಬಂಡಾಯವೆದ್ದ ಬೆನ್ನಲೇ ಇಂದು 11 ಗಂಟೆಗೆ ಸಿಎಂ ಬಿಎಸ್ ಯಡಿಯೂರಪ್ಪ ತುರ್ತು ಸಭೆ ಕರೆದಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಈ ಕಾರಣದಿಂದ ಸಿಎಂ ಬಿಎಸ್ ಯಡಿಯೂರಪ್ಪರನ್ನು ಭೇಟಿ ಮಾಡಲು ಮುಂದಾದ ಪ್ರಭಾಕರ್ ಕೋರೆ