Publish Date: Fri, 15 Nov 2019 (18:30 IST)
Updated Date: Fri, 15 Nov 2019 (18:31 IST)
ಪುಡಿ ರೌಡಿಗಳು ಬಾರ್ ವೊಂದರಲ್ಲಿ ಮಾಡಿರೋ ಕೃತ್ಯಕ್ಕೆ ಬಾರ್ ನಲ್ಲಿದ್ದ ಮಂದಿ ಬೆಚ್ಚಿ ಬಿದ್ದಿದ್ದಾರೆ.
ಬೆಂಗಳೂರಿನ ರಾಘವನಗರದಲ್ಲಿ ಘಟನೆ ನಡೆದಿದೆ.
ಆಟೋ ಚಾಲಕ ಸತೀಶ್ ಎಂಬಾತ ಬಾರ್ ನಲ್ಲಿದ್ದ ಕಿಡಿಗೇಡಿಗಳನ್ನು ದುರುಗುಟ್ಟಿ ನೋಡಿದ್ದಾರೆ. ಇದರಿಂದ ಕೆರಳಿದ ಕಿಡಿಗೇಡಿಗಳು ಮನಸೋ ಇಚ್ಛೆ ಥಳಿಸಿದ್ದಾರೆ.
ಗಾಯಗೊಂಡಿರೋ ಸತೀಶ್ ನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಹಲ್ಲೆ ಮಾಡಿರೋ ಆರೋಪಿಗಳಾದ ಜೋಗಯ್ಯ, ವಿಕ್ಕಿ, ಪುನಿತ್ ಸೇರಿ ನಾಲ್ಕು ಕಿಡಗೇಡಿಗಳನ್ನು ಪೊಲೀಸರು ಬಂಧಿಸಿದ್ದಾರೆ.