Publish Date: Tue, 05 Nov 2019 (10:38 IST)
Updated Date: Tue, 05 Nov 2019 (10:41 IST)
ಹಾಸನ : ಕುಡಿದ ಮತ್ತಿನಲ್ಲಿ ತಂದೆಯೊಬ್ಬ ಮಗಳ ಮೇಲೆ ಸುತ್ತಿಗೆಯಿಂದ ಹಲ್ಲೆ ಮಾಡಿದ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ಪಟ್ಟಣದ ಚಂಪಕನಗರದಲ್ಲಿ ನಡೆದಿದೆ.
ಪ್ರಶಾಂತ್ ಹಲ್ಲೆ ಮಾಡಿದ ಆರೋಪಿ. ಸಿನಿಮಾ ಡೈಲಾಗ್ ಹೇಳುತ್ತಾ ಈತ ತನ್ನ ಮಗಳ ಕೈಗೆ ಸುತ್ತಿಗೆಯಿಂದ ಹೊಡೆದಿದ್ದಾನೆ. ತಾಯಿ ಬಿಡಿಸಲು ಬಂದರು ಆಕೆಯನ್ನು ತಳ್ಳಿ ಮಗಳ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡಿದ್ದಾನೆ. ಇದಕ್ಕೆ ಸಂಬಂಧಪಟ್ಟ ವಿಡಿಯೋ ವೈರಲ್ ಆಗಿದೆ.
ಮಗಳ ಕೈಗೆ ತೀವ್ರವಾಗಿ ಪೆಟ್ಟಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈತನಿಗೆ ಇಬ್ಬರು ಹೆಣ್ಣುಮಕ್ಕಳಿದ್ದು, ಈ ಕಾರಣಕ್ಕೆ ಈತ ಪ್ರತಿದಿನ ಕುಡಿದು ಬಂದು ಮಕ್ಕಳ ಮೇಲೆ ಹಲ್ಲೆ ಮಾಡುತ್ತಿದ್ದ ಎನ್ನಲಾಗಿದೆ.