Publish Date: Thu, 31 Oct 2019 (11:35 IST)
Updated Date: Thu, 31 Oct 2019 (11:37 IST)
ಹೊಸಕೋಟೆ: ನಾನು ಯಾವ ಒತ್ತಡಕ್ಕೂ ಜಗ್ಗುವುದಿಲ್ಲ ಬಗ್ಗೊದಿಲ್ಲ ಬಿಜೆಪಿ ನಾಯಕರಿಗೆ ಶರತ್ ಬಚ್ಚೇಗೌಡ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.
ನಂಗೆ ಮೋಸ ಆಗ್ತಿದೆ ಅಂತಾ ಯಾರ್ಯಾರೋ ಕಣ್ಣೀರು ಹಾಕಿದ್ದಾರಂತೆ. ಅವರಿಗೆಲ್ಲಾ ಏನು ಮೋಸ ಆಗಿದೆಯೋ ನನಗೆ ಗೊತ್ತಿಲ್ಲ. ಹೊಸಕೋಟೆ ಇತಿಹಾಸದಲ್ಲೇ ಇಲ್ಲಿಯವರೆಗೂ ಬೈ ಎಲೆಕ್ಷನ್ ನಡೆದಿಲ್ಲ. ಶರತ್ ಮೃದು ಸ್ವಭಾವದವನು, ಸಾಫ್ಟ್ ಆಗಿರ್ತಾನೆ . ಒತ್ತಡ, ಭಯಕ್ಕೆ ಮಣಿದು ಚುನಾವಣೆಯಿಂದ ಹಿಂದೆ ಸರಿಯುತ್ತಾನೆ ಹೀಗೆಲ್ಲಾ ನನ್ನ ಬಗ್ಗೆ ಕೆಲ ಜನರು ಅಪಪ್ರಚಾರ ಮಾಡುತ್ತಿದ್ದಾರೆ. ಆದ್ರೆ ಯಾವುದೇ ಕಾರಣಕ್ಕೂ ಚುನಾವಣೆಯಿಂದ ಹಿಂದೆ ಸರಿಯಲ್ಲ. ತಾಲೂಕಿನ ಸ್ವಾಭಿಮಾನಕ್ಕಾಗಿ, ಜನಕ್ಕೆ ನೀಡಿರೋ ಮಾತಿಗಾಗಿ ಚುನಾವಣೆಯಿಂದ ನಾನು ಹಿಂದೆ ಸರಿಯೋ ಪ್ರಶ್ನೆಯೇ ಇಲ್ಲ ಎಂದು ಶರತ್ ಬಚ್ಚೇಗೌಡ ಸ್ಪಷ್ಟವಾಗಿ ಹೇಳಿದ್ದಾರೆ.
ಬಚ್ಚೇಗೌಡರು ನಾನು ತಂದೆ ಮಕ್ಕಳಾದ್ರೂ ನಾವು ಒಟ್ಟಾಗಿ ಇರ್ತಿಲ್ಲ. ತಂದೆ ಬಚ್ಚೇಗೌಡರಿಗೆ ತೊಂದರೆ ಮಾಡ್ತಾರೆಂದು ಪ್ರಚಾರ ಮಾಡಿದ್ದಾರೆ. ನಾನು ಚುನಾವಣೆಗೆ ನಿಂತ್ರೆ ತಂದೆಗೆ ತೊಂದರೆಯಾಗುತ್ತೆ ಅಂತಿದ್ದಾರೆ. ತಂದೆಗೆ ತೊಂದರೆಯಾಗಬಾರದು ಅಂತ ಮನೆ ಬಿಟ್ಟು ಬಂದಿದ್ದೀನಿ. ಚುನಾವಣಾ ಪ್ರಚಾರಕ್ಕೆ ತಂದೆ ಬರದ ಕಾರಣ ನೀವೇ ನನ್ನ ತಂದೆ ತಾಯಿಯಾಗಿ ಪ್ರಚಾರ ಮಾಡಿ ಬೆಂಬಲ ನೀಡಿ ಎಂದು ಅವರು ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.