Publish Date: Mon, 04 Nov 2019 (18:56 IST)
Updated Date: Mon, 04 Nov 2019 (18:58 IST)
ಕ್ಷುಲ್ಲಕ ಕಾರಣಕ್ಕೆ ಬಸ್ ಚಾಲಕನ ಮೇಲೆ ಹಲ್ಲೆ ನಡೆದಿದೆ.
ರಸ್ತೆ ಮಧ್ಯೆ ನಿಂತ ಯುವಕರ ಗುಂಪೊಂದು ಬಸ್ ಚಾಲಕನ ಮೇಲೆ ಹಲ್ಲೆ ಮಾಡಿದ ಘಟನೆ ಅಥಣಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ನಡೆದಿದೆ.
ಮುದ್ದೇಬಿಹಾಳದಿಂದ ಮೀರಜ್ ಕಡೆ ಹೊರಟಿದ್ದ ಬಸ್ ಚಾಲಕನ ಮೇಲೆ ನಡೆದ ಹಲ್ಲೆ ಇದಾಗಿದೆ.
ರಸ್ತೆ ನಡುವೆ ನಿಂತ ಯುವಕರಿಗೆ ಚಾಲಕ ರಸ್ತೆ ಬಿಟ್ಟು ಪಕ್ಕಕ್ಕೆ ಸರಿಯಿರಿ ಎಂದು ಹೇಳಿದ್ದಕ್ಕೆ ಸಿಟ್ಟಿಗೆದ್ದ ಯುವಕರು ಚಾಲಕನ ಮೂಗಿಗೆ ಗುದ್ದು ಕೊಟ್ಟಿದ್ದಾರೆ.
ಏಟು ತಿಂದ ಚಾಲಕನನ್ನು ಸ್ಥಳೀಯರು ಅಥಣಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಹಿಡಿಯಲು ಹೋದ ಸಾರ್ವಜನಿಕರ ಕೈಯಿಂದ ತಪ್ಪಿಸಿಕೊಂಡು ಯುವಕರು ಪರಾರಿಯಾಗಿದ್ದಾರೆ.