Select Your Language

Notifications

webdunia
webdunia
webdunia
webdunia

ಕೊಲೆ ಆರೋಪಿಗೆ ಹಾಡಹಗಲೇ ಚೂರಿ ಇರಿತ

ಹಗಲು
ಹಾಸನ , ಮಂಗಳವಾರ, 29 ಅಕ್ಟೋಬರ್ 2019 (16:58 IST)
ಹಾಡಹಗಲೇ ಕೊಲೆ ಆರೋಪಿಗೆ ಚೂರಿ ಇರಿದಿರೋ ಘಟನೆ ನಡೆದಿದೆ.

ಹಾಸನದ ಚನ್ನರಾಯಪಟ್ಟಣದಲ್ಲಿ ಮತ್ತೆ ನೆತ್ತರು ಹರಿದಿದೆ. ಹಾಡಹಗಲೇ ಕೊಲೆ ಆರೋಪಿಗೆ ಚೂರಿ ಇರಿತವಾಗಿದೆ.
ಅಭಿ (24) ಚೂರಿ ಒಳತಕ್ಕೆ ಒಳಗಾದವನು.

ಚನ್ನರಾಯಪಟ್ಟಣದ ಕಾಳಿಕಾಂಬ ರಸ್ತೆಯಲ್ಲಿ ಘಟನೆ ನಡೆದಿದೆ. ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದನು ಅಭಿ.
ಒಂದು ತಿಂಗಳ‌ ಹಿಂದೆ ಜಾಮೀನಿನ‌ ಮೇಲೆ ಹೊರಗೆ ಬಂದಿದ್ದ. ಕಳೆದ ರಾತ್ರಿ ಗೂರಮಾರನಹಳ್ಳಿಯಲ್ಲಿ‌ ಗಲಾಟೆ ಮಾಡಿಕೊಂಡಿದ್ದನು ಅಭಿ. ಇಂದು ಬೆಳಗ್ಗೆ ನಡು ರಸ್ತೆಯಲ್ಲೇ ಅಭಿ ಮೇಲೆ ಅಟ್ಯಾಕ್ ನಡೆದಿದ್ದು, ಚಾಕುವಿನಿಂದ ಇರಿದು ಯುವಕರ ಗುಂಪು ಪರಾರಿಯಾಗಿದೆ.

ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಹುಡುಗಿಯರನ್ನು ಇಟ್ಟುಕೊಂಡು ಆ ಕೆಲಸ ಮಾಡುತ್ತಿದ್ದ ಭೂಪ ಅಂದರ್