ಹಾಡಹಗಲಲ್ಲೇ ನಡೆಯಬಾರದ ಘಟನೆ ನಡೆದುಹೋಗಿದೆ.
									
										
								
																	ಹಾಡಹಗಲೇ ವ್ಯಕ್ತಿಗೆ ಚಾಕು ಇರಿದು, ಲಾಂಗ್ ನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನ ನಡೆಸಲಾಗಿದೆ. ಮಂಡ್ಯದ  ಮದ್ದೂರು ಹತ್ತಿರದ ಕೆ ಎಂ ದೊಡ್ಡಿಯಲ್ಲಿ ಘಟನೆ ನಡೆದಿದೆ.
									
			
			 
 			
 
 			
			                     
							
							
			        							
								
																	ನವೀನ್ ಅಲಿಯಾಸ್ ಕುಟ್ಟಿ (32) ಹಲ್ಲೆಗೊಳಗಾದ ಯುವಕನಾಗಿದ್ದಾನೆ. ಕೆ ಎಂ ದೊಡ್ಡಿ ನಿವಾಸಿಯಾಗಿರೋ ನವೀನ್ ಮೇಲೆ ಮೂವರಿಂದ ಹಲ್ಲೆ ನಡೆದಿದೆ.
									
										
								
																	ಹಲ್ಲೆಗೊಳಗಾದ ನವೀನ್ ಗೆ ಕೆ ಎಂ ದೊಡ್ಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ.
ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಮೆಡಿಕಲ್ ಕಾಲೇಜಿಗೆ ರವಾನೆ ಮಾಡಲಾಗಿದೆ. ಕೆ ಎಂ ದೊಡ್ಡಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.