Publish Date: Wed, 18 Sep 2019 (15:11 IST)
Updated Date: Wed, 18 Sep 2019 (15:14 IST)
ಟ್ಯೂಷನ್ ಹೇಳಿಕೊಡುತ್ತಿದ್ದ ಶಿಕ್ಷಕಿಯೊಬ್ಬಳ ಮೇಲೆ 7 ನೇ ತರಗತಿ ವಿದ್ಯಾರ್ಥಿ ಮಾಡಬಾರದ ನೀಚ ಕೆಲಸ ಮಾಡಿದ್ದಾನೆ.
ಟ್ಯೂಷನ್ ಹೋಮ್ ವರ್ಕ್ ಮಾಡಿಕೊಂಡು ಬಂದಿಲ್ಲ ಅಂತ ವಿದ್ಯಾರ್ಥಿಗೆ ಶಿಕ್ಷಕಿಯು ಬೈದದ್ದೇ ಆಕೆಯ ದುರಂತ ಸಾವಿಗೆ ಕಾರಣವಾಗಿಹೋಗಿದೆ.
ಶಿಕ್ಷಕಿಯಿಂದ ಬೈಸಿಕೊಂಡಿದ್ದ ರೋಷದಲ್ಲಿ ಮನೆಗೆ ಬಂದು ಚಾಕು ಹಿಡಿದ ವಿದ್ಯಾರ್ಥಿ ಶಿಕ್ಷಕಿ ಆಯಿಷಾ ಳನ್ನು ಚಾಕುವಿನಿಂದ ಚುಚ್ಚಿ ಚುಚ್ಚಿ ಕೊಲೆಮಾಡಿದ್ದಾನೆ.
ಮುಂಬೈನ ಗೋವಂಡಿಯಲ್ಲಿ ಈ ದುರ್ಘಟನೆ ನಡೆದಿದ್ದು, ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.