ಸರಕಾರಿ ಶಾಲೆ ಶಿಕ್ಷಕಿಗೆ ಕಲ್ಲು ಎಸೆಯುತ್ತಿರೋರು ಯಾರು?

ಬುಧವಾರ, 11 ಸೆಪ್ಟಂಬರ್ 2019 (18:09 IST)
ಸರಕಾರಿ ಶಾಲೆಯ ಶಿಕ್ಷಕರು ಹಾಗೂ ಮಕ್ಕಳ ಮೇಲೆ ಕಲ್ಲುಗಳು ಬೀಳುತ್ತಿವೆ.

ಬಾಗಲಕೋಟೆ ಜಿಲ್ಲೆಯ ಇಂಜಿನವಾರಿ ಸರಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದೆ.

ಪ್ರತಿದಿನ ಮಕ್ಕಳು, ಶಿಕ್ಷಕಿ, ಶಿಕ್ಷಕರು ಶಾಲೆಗೆ ಬರುತ್ತಿದ್ದಂತೆ ಇದ್ದಕ್ಕಿದ್ದಂತೆ ಕಲ್ಲುಗಳು ಬೀಳುತ್ತಿವೆ. ಭಾನಾಮತಿ ಮಾಡಿಸಿರಬಹುದೆಂದು ಜನರು ನಂಬಿದ್ದಾರೆ.

ಕಲ್ಲೇಟು ಶಿಕ್ಷಕರು ಹಾಗೂ ಮಕ್ಕಳಿಗೆ ಗಾಯ ಮಾಡುತ್ತಿವೆ.  ಪೊಲೀಸರು, ಶಿಕ್ಷಣ ಇಲಾಖೆ ಸಿಬ್ಬಂದಿ ಶಾಲೆಗೆ ಭೇಟಿ ನೀಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮೋಹರಂನಲ್ಲಿ ಮಾರಾಮಾರಿ ನಡೆದದ್ದು ಹೇಗೆ?