Publish Date: Mon, 28 Oct 2019 (17:26 IST)
Updated Date: Mon, 28 Oct 2019 (17:28 IST)
ದೀಪಾವಳಿ ಹಬ್ಬದ ಅಂಗವಾಗಿ ಹಚ್ಚಿದ ಪಟಾಕಿಯೇ ಯುವಕನೊಬ್ಬನ ಕೊಲೆಗೆ ಕಾರಣವಾಗಿದೆ.
ಪಟಾಕಿ ಸಿಡಿಸಿದ್ದೇ ಯುವಕನ ಬಾಳು ಅಂತ್ಯವಾಗಲು ಕಾರಣವಾಗಿದೆ. ಅಮರೇಶ್ ಎಂಬಾತ ತನ್ನ ಗೆಳೆಯರ ಜೊತೆಗೂಡಿ ರಾತ್ರಿ ಸಮಯದಲ್ಲಿ ಪಟಾಕಿ ಸಿಡಿಸುತ್ತಿದ್ದನು. ಆಗ ಅಕ್ಕಪಕ್ಕದ ಮನೆಗಳ ನಿವಾಸಿಗಳು ಪಟಾಕಿ ಸಿಡಿಸಬೇಡಿ ಅಂತ ಕ್ಯಾತೆ ತೆಗೆದಿದ್ದಾರೆ.
ಸುತ್ತಲಿನ ನಿವಾಸಿಗಳು ಹಾಗೂ ಅಮರೇಶ್ ಗೆಳೆಯರ ನಡುವೆ ವಾಗ್ವಾದ ಜೋರಾಗಿದೆ. ಈ ನಡುವೆ ತಲ್ವಾರ್ ಹಿಡಿದು ಬಂದ ಕೆಲವರು ಅಮರೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಒಡಿಶಾದ ಭುವನೇಶ್ವರ್ ನಲ್ಲಿ ಈ ಘಟನೆ ನಡೆದಿದೆ.