Select Your Language

Notifications

webdunia
webdunia
webdunia
webdunia

ವಿವಾದದ ಕಿಡಿ ಹೊತ್ತಿಸಿದೆ ಡಿಸಿಎಂ ಅಶ್ವತ್ ನಾರಾಯಣ ಮಾಡಿದ ಈ ಟ್ವೀಟ್

ವಿವಾದದ ಕಿಡಿ ಹೊತ್ತಿಸಿದೆ ಡಿಸಿಎಂ ಅಶ್ವತ್ ನಾರಾಯಣ ಮಾಡಿದ ಈ ಟ್ವೀಟ್
ಬೆಂಗಳೂರು , ಸೋಮವಾರ, 28 ಅಕ್ಟೋಬರ್ 2019 (06:54 IST)
ಬೆಂಗಳೂರು : 260 ವರ್ಷಗಳ ಹಿಂದೆ ನರಕ ಚತುರ್ಥಿಯ ದಿನ ನಡೆದ ಘಟನೆಯೊಂದರ ಬಗ್ಗೆ ಟ್ವೀಟ್ ಮಾಡಿ ನೆನಪಿಸುವುದರ ಮೂಲಕ ಡಿಸಿಎಂ ಅಶ್ವತ್ ನಾರಾಯಣ ವಿವಾದದ ಕಿಡಿ ಹೊತ್ತಿಸಿದ್ದಾರೆ.




260 ವರ್ಷಗಳ ಹಿಂದೆ ನರಕ ಚತುರ್ಥಿಯ ದಿನ ಟಿಪ್ಪು ಸುಲ್ತಾನ ನಡೆಸಿದ ಕ್ರೌರ್ಯದ ಬಗ್ಗೆ ಟ್ವೀಟ್ ಮಾಡಿರುವ ಡಿಸಿಎಂ ಅಶ್ವತ್ ನಾರಾಯಣ, 2 ಶತಮಾನಗಳ ಹಿಂದೆ ನರಕ ಚತುರ್ಥಿಯ ದಿನ ಟಿಪ್ಪು ಸುಲ್ತಾನನ ಕ್ರೌರ್ಯ, ಅಟ್ಟಹಾಸಕ್ಕೆ ಅಸಹಾಯಕ ಮಹಿಳೆಯರು  ಮತ್ತು ಮಕ್ಕಳು ಸೇರಿದಂತೆ 800 ಮುಗ್ಧ ಜನರು ಬಲಿಯಾದರು. ದೇಶದೆಲ್ಲೆಡೆ ಅಂದು ಹಬ್ಬವನ್ನು ಆಚರಿಸುತ್ತಿದ್ದರೆ ನಮ್ಮ ರಾಜ್ಯದ ಮೇಲುಕೋಟೆಯಲ್ಲಿ ದೀಪಾವಳಿಯ ಸಂಭ್ರಮವಿಲ್ಲದೆ ಕತ್ತಲು ಆವರಿಸಿತ್ತು ಎಂದು ಮತ್ತೆ ವಿವಾದ ಸೃಷ್ಟಿಸಿದ್ದಾರೆ.
.

ಇಂತಹ ಘಟನೆ ನಮ್ಮ ಇತಿಹಾಸದ ಪುಟಗಳಲ್ಲಿ ಮಾತ್ರ ಸೀಮಿತವಾಗಿರಬಾರದು. ನಮ್ಮ ಸಾಮೂಹಿಕ ನೆನಪಿನಿಂದಲೂ ಮಾಸಬಾರದು. ಮೇಲುಕೋಟೆ ಹತ್ಯಾಕಾಂಡದ ಹುತಾತ್ಮರನ್ನು ಇಂದು ನಾವೆಲ್ಲರೂ ನೆನೆಯೋಣ ಎಂದು ಅವರು ಟ್ವಿಟ್ ಮೂಲಕ ತಿಳಿಸಿದ್ದಾರೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಅತೃಪ್ತ ಶಾಸಕರ ಬಗ್ಗೆ ವಿನಾಕಾರಣ ಹೇಳಿಕೆ ನೀಡುತ್ತಿದ್ದಾರೆ- ಡಿಸಿಎಂ ಲಕ್ಷ್ಮಣ್ ಸವದಿ ವಿರುದ್ಧ ಗುಡುಗಿದ ರೇಣುಕಾಚಾರ್ಯ