Select Your Language

Notifications

webdunia
webdunia
webdunia
webdunia

ಪತಿಯ ಜೊತೆ ಸೇರಿ ಪ್ರಿಯಕರನನ್ನು ಕೊಂದ ಪ್ರೇಯಸಿ

ಪತಿಯ ಜೊತೆ ಸೇರಿ ಪ್ರಿಯಕರನನ್ನು ಕೊಂದ ಪ್ರೇಯಸಿ
ಪಾಟ್ನಾ , ಸೋಮವಾರ, 28 ಅಕ್ಟೋಬರ್ 2019 (14:13 IST)
ಪಾಟ್ನಾ : ಪೋನ್ ಮಾಡಿ ಕಿರುಕುಳ ನೀಡುತ್ತಿದ್ದ ಪ್ರಿಯಕರನನ್ನು, ಪ್ರೇಯಸಿ ತನ್ನ ಪತಿಯ ಜೊತೆ ಸೇರಿ ಕೊಲೆ ಮಾಡಿದ ಘಟನೆ ಬಿಹಾರದ ಮುಂಗೇರ್ ನಲ್ಲಿ ನಡೆದಿದೆ.




ಜೈಕರಣ್ ಕೊಲೆಯಾದ ಪ್ರಿಯತಮ. ರವೀನಾ ಮತ್ತು ನಂದು ಕೊಲೆ ಮಾಡಿದ ದಂಪತಿ. ಜೈಕರಣ್ ನನ್ನು ಪ್ರೀತಿಸುತ್ತಿದ್ದ ರವೀನಾ ಬಳಿಕ ಆತನನ್ನು ಬಿಟ್ಟು ನಂದುವನ್ನು ಪ್ರೀತಿಸಿ ಮದುವೆಯಾದಳು. ಈ ಹಿನ್ನಲೆಯಲ್ಲಿ  ಜೈಕರಣ್ ಆಕೆಗೆ ಫೊನ್ ಮಾಡಿ ಕಿರುಕುಳ ನೀಡುತ್ತಿದ್ದ. ಆದಕಾರಣ ಈ ದಂಪತಿಗಳು, ತಮ್ಮ ಸ್ನೇಹಿತರೊಡನೆ ಸೇರಿ ಜೈಕರಣ್ ನನ್ನು ಹೊಡೆದು  ಕೊಲೆ ಮಾಡಿದ್ದಾರೆ.


ತಮ್ಮ ಮಗನ ಕೊಲೆ ಬಗ್ಗೆ ಜೈಕರಣ್ ತಂದೆ ಪೊಲೀಸರಿಗೆ ದೂರು ನೀಡಿದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಶುರುಮಾಡಿದ್ದಾರೆ. ಆಗ ಮೃತನ ಫೋನ್ ನನ್ನು ಆರೋಪಿಗಳು ಬಳಸುತ್ತಿದ್ದ ಕಾರಣ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾರೆ. ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆರೋಪಿಗಳು ಸತ್ಯಾಂಶ ಬಾಯ್ಬಿಟ್ಟಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿಯ 8 ಶಾಸಕರು ಬಂಡಾಯವೆದ್ರೆ ಸರ್ಕಾರ ಪತನ- ರಾಜು ಕಾಗೆ