Publish Date: Mon, 28 Oct 2019 (14:10 IST)
Updated Date: Mon, 28 Oct 2019 (14:12 IST)
ಬೆಳಗಾವಿ : ಅನರ್ಹರ ತ್ಯಾಗದಿಂದಲೇ ಬಿಜೆಪಿ ಸರ್ಕಾರ ಎಂಬುದು ಭ್ರಮೆ ಎಂದು ಬಿಜೆಪಿ ಮುಖಂಡ ರಾಜುಕಾಗೆ ಹೇಳಿದ್ದಾರೆ.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರಖರ್ದದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿದೆ ಎಂಬುದು ಹೈಕಮಾಂಡ್ ಭ್ರಮೆ. ಬಿಜೆಪಿಯಲ್ಲಿ ಈಗಾಗಲೇ 106 ಶಾಸಕರಿದ್ದಾರೆ. ಬಿಜೆಪಿಗೆ ಬಹುಮತ ಬರಲು 8 ಶಾಸಕರ ಅವಶ್ಯಕತೆಯಿದೆ ಎಂದು ಹೇಳಿದ್ದಾರೆ.
ಆದ್ದರಿಂದ ಉಪಚುನಾವಣೆಯಲ್ಲಿ 15 ಕ್ಷೇತ್ರದ ಪೈಕಿ 8 ರಲ್ಲಿ ಗೆಲ್ಲಲೇಬೇಕು. ಒಂದು ವೇಳೆ ಮತ್ತೆ ಬಿಜೆಪಿಯ 8 ಶಾಸಕರು ಬಂಡಾಯವೆದ್ರೆ ಸರ್ಕಾರ ಪತನವಾಗುವುದು ಖಂಡಿತ ಎಂದು ಅವರು ಭವಿಷ್ಯ ನುಡಿದಿದ್ದಾರೆ.