Publish Date: Wed, 10 May 2023 (15:49 IST)
Updated Date: Wed, 10 May 2023 (15:54 IST)
ಮತದಾನ ಮಾಡಲು ಬಂದ್ ರಿಯಲ್ ಸ್ಟಾರ್ ಉಪೇಂದ್ರ ಕತ್ರಿಗುಪ್ಪೆ ಸರ್ಕಾರಿ ಶಾಲೆ ಆರ್ಚ್ ಸಮೀಪ ಇರುವ ಮತಗಟ್ಟೆ ಕೇಂದ್ರಕ್ಕೆ ಆಗಮಿಸಿ ಮತವನ್ನ ಉಪೇಂದ್ರ ಹಾಕಿದ್ರು. ತದನಂತರ ಮಾತನಾಡಿದ ನಟ ಉಪೇಂದ್ರ ಮತದಾನ ನಮ್ಮ ಭವಿಷ್ಯ ಕಾಪಾಡುತ್ತೆ.ಇಡೀ ದೇಶದ ಭವಿಷ್ಯ ನಮ್ಮೆಲ್ಲರ ಭವಿಷ್ಯ ಓಟಿಂಗ್ ನಲ್ಲೆ ಇರೋದು.ಈ ಸಲ 70 ಪರ್ಸೆಂಟ್ ವೋಟ್ ಆಗುತ್ತೆ ನೋಡಿ.ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಬೇಕು.ವೋಟ್ ಹಾಕದೆ ಆಮೇಲೆ ಸರ್ಕಾರವನ್ನ ಶಪಿಸುವುದು ಸರಿ ಅಲ್ಲ ಎಂದು ಯುವ ಜನತೆಗೆ ರಿಯಲ್ ಸ್ಟಾರ್ ಉಪ್ಪಿ ಸಂದೇಶ ನೀಡಿದ್ರು.