Publish Date: Wed, 10 May 2023 (13:00 IST)
Updated Date: Wed, 10 May 2023 (13:47 IST)
ಅಂಗ ವೈಕಲ್ಯದ ನಡುವೆಯೂ ಅಶ್ವತ್ ಮತದಾನ ಮಾಡಿ ಮಾದರಿಯಾಗಿದ್ದಾರೆ.ಗೋವಿಂದರಾಜನಗರದ ಪಂತರ ಪಾಳ್ಯ ವಾರ್ಡ್ ನಲ್ಲಿ ದಿವ್ಯಂಗ ಚೇತನ ವೋಟ್ ಮಾಡಿದ್ದಾರೆ.ತಂದೆ ತಾಯಿ ಸಹಾಯದಿಂದ ಮತಗಟ್ಟೆಗೆ ಬಂದು ವೋಟ್ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ.ಹುಟ್ಟಿದಾಗಿನಿಂದಲೂ ಅಂಗ ವೈಕಲ್ಯದಿಂದ ಅಶ್ವಥ್ ಬಳಲುತ್ತಿದ್ದು,ಮತದಾನ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾನೆ.
ಅಲ್ಲದೇ ಶಂಕರ್ ಎಂಬ ವಿಶೇಷ ಚೇತನರಿಂದ ಮತದಾನ ನಡೆದಿದೆ.60 ವರ್ಷದ ಶಂಕರ್ ಗೆ ಎರಡು ಕಾಲು ಇಲ್ಲ.ಬನಶಂಕರಿಯಿಂದ ಬಂದು ಶಂಕರ್ ಬ್ಲೂಮಿಂಗ್ ಗ್ಲೋರಿ ಹೈ ಸ್ಕೂಲ್ ನಲ್ಲಿ ಮತದಾನ ಮಾಡಿದ್ದಾರೆ.ಎಮ್ ಎಸ್ ರಾಮಯ್ಯ ಹಿಂಬಾಗದ ಮತಗಟ್ಟೆಯಲ್ಲಿ ವೀಲ್ ಚೇರ್ ನಲ್ಲಿ ಬಂದು ಮತದಾನ ಮಾಡಿ ಶಂಕರ್ ಎಲ್ಲರಿಗೂ ಮಾದರಿಯಾಗಿದ್ದಾರೆ.