Select Your Language

Notifications

webdunia
webdunia
webdunia
webdunia

ಆರೋಪಿ ಸೌಮ್ಯ ಅರೆಸ್ಟ್

ಆರೋಪಿ ಸೌಮ್ಯ ಅರೆಸ್ಟ್
bangalore , ಸೋಮವಾರ, 25 ಏಪ್ರಿಲ್ 2022 (18:23 IST)
ಸಹಾಯಕ ಪ್ರಾಧ್ಯಾಪಕರ ಪರೀಕ್ಷೆ ಪೇಪರ್ ಸೋರಿಕೆ ಆಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಸೌಮ್ಯರನ್ನು ಬೆಂಗಳೂರಿನ ಮಲ್ಲೇಶ್ವರಂ ಠಾಣೆ ಪೊಲೀಸರು ಬಂಧಿಸಿದ್ದಾರೆ..ಪೊಲೀಸರು ಮೈ ಸೂರಿನಲ್ಲಿ ಬಂಧಿಸಿ ಬೆಂಗಳೂರಿಗೆ ನಿನ್ನೆ ಕರೆತಂದಿದ್ದು, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.. ಇಂದು ಮತ್ತೆ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಲಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ನೀಡುವಂತೆ ಪೊಲೀಸರು 32ನೇ ಎಸಿಎಂಎಂ ಕೋರ್ಟ್​​ಗೆ ಮನವಿ ಮಾಡುತ್ತಾರೆ..ಪರೀಕ್ಷೆ ಆರಂಭದ 1 ಗಂಟೆ ಮುಂಚಿತವಾಗಿ ಗೆಳತಿ ಒಬ್ಬಳಿಗೆ 18 ಪ್ರಶ್ನೋತ್ತರಗಳ ಮಾಹಿತಿಯನ್ನು ವಾಟ್ಸಾಪ್​​​ನಲ್ಲಿ ಕಳಿಸಿದ್ದರು.. ಆಕೆಯಿಂದ ಬೆಂಗಳೂರಿನ ರಾಮಕೃ ಷ್ಣ ಎಂಬುವರಿಗೆ ಮಾಹಿತಿ ಶೇರ್ ಆಗಿತ್ತು.. ಸೌಮ್ಯಾಗೆ ಪ್ರಶ್ನೆಗಳು ಸಿಕ್ಕ ಬಗ್ಗೆ ಪೊಲೀಸರು ಚರ್ಚೆ ನಡೆಸಿದ್ದಾರೆ..ವಿಚಾರಣೆ ಬಳಿಕ ಮತ್ತಷ್ಟು ಮಾಹಿತಿ ಹೊರಬರುವ ಸಾಧ್ಯತೆಯಿದೆ ಎನ್ನಲಾಗ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೃತಪಟ್ಟ ನೌಕರನ ಮೊಬೈಲ್ ಬಳಕೆ..!