Select Your Language

Notifications

webdunia
webdunia
webdunia
webdunia

ಅನರ್ಹ ಶಾಸಕರ ಮನೆಯ ಸ್ವೀಟಿ ಸಾವು

webdunia
ಬುಧವಾರ, 6 ನವೆಂಬರ್ 2019 (16:50 IST)
ಅನರ್ಹ ಶಾಸಕರಿಗೆ ಆಘಾತವಾದ ಘಟನೆ ನಡೆದಿದೆ.

ಮಂಡ್ಯದ  ಅನರ್ಹ ಶಾಸಕ ಡಾ. ನಾರಾಯಣಗೌಡರ ಸಾಕು ನಾಯಿ ಸ್ವೀಟಿ ಅನಾರೋಗ್ಯದಿಂದ ಸಾವನ್ನಪ್ಪಿದೆ.
ಶಾಸ್ತ್ರೋಕ್ತವಾಗಿ ವಿಧಿ ಬದ್ಧವಾಗಿ ಅಂತ್ಯಕ್ರಿಯೆ ಹಾಗೂ ಉತ್ತರ ಕ್ರಿಯೆಯ ಕಾರ್ಯ ನೆರವೇರಿಸಲಾಯಿತು.

ನಾರಾಯಣಗೌಡರ ಸಾಧುಗೋನಹಳ್ಳಿ ಹೊರವಲಯದ ತೋಟದಲ್ಲಿ ಶ್ವಾನದ ಅಂತ್ಯ ಸಂಸ್ಕಾರ ನಡೆಯಿತು.
ನಾರಾಯಣಗೌಡರನ್ನು ಅತಿಯಾಗಿ ಹಚ್ಚಿಕೊಂಡಿದ್ದ ಪಗ್ ಜಾತಿಯ ನಾಯಿ ಸ್ವೀಟಿಯ ಸಾವು ಭಾರೀ ನೋವು ತಂದಿದೆ ಎಂದು ಶಾಸಕರ ಆಪ್ತಮಿತ್ರ ಕೊಮ್ಮೇನಹಳ್ಳಿ ಜಗದೀಶ್ ಹೇಳಿದ್ದಾರೆ.

ಅನರ್ಹ ಶಾಸಕ ಡಾ. ನಾರಾಯಣಗೌಡರ ಪತ್ನಿ ದೇವಕಿ ನಾರಾಯಣಗೌಡ, ಪುತ್ರಿ ಲೀನಾಕರಣ್, ಉತ್ತರಕ್ರಿಯಾದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಮನೆಯ ಸಾಕು ನಾಯಿ ಸ್ವೀಟಿಗೆ ಅಂತಿಮ‌ ನಮನ ಸಲ್ಲಿಸಿದರು.Share this Story:

Follow Webdunia Hindi

ಮುಂದಿನ ಸುದ್ದಿ

15 ಟನ್ ಪಡಿತರ ಅಕ್ಕಿ ಅಕ್ರಮವಾಗಿ ಎಲ್ಲಿಗೆ ಹೋಗುತ್ತಿತ್ತು?