Publish Date: Tue, 05 Nov 2019 (16:56 IST)
Updated Date: Tue, 05 Nov 2019 (16:58 IST)
ಅನರ್ಹ ಶಾಸಕರೊಬ್ಬರ ಪತ್ನಿ ಟೆಂಪಲ್ ರನ್ ಶುರುವಿಟ್ಟುಕೊಂಡಿದ್ದಾರೆ.
ಮಂಡ್ಯದ ಕೃಷ್ಣರಾಜಪೇಟೆ ಅನರ್ಹ ಶಾಸಕ ನಾರಾಯಣಗೌಡರ ಪತ್ನಿ ದೇವಕಿ ನಾರಾಯಣಗೌಡರು ಟೆಂಪಲ್ ರನ್ ಮಾಡಿದ್ದಾರೆ.
ಪತಿ, ಅನರ್ಹ ಶಾಸಕ ನಾರಾಯಣಗೌಡರಿಗೆ ಸುಪ್ರೀಂಕೋರ್ಟ್ ತೀರ್ಪು ಶುಭವಾಗಲೆಂದು ಮನೆದೇವರು ಕೈಗೋನಹಳ್ಳಿಯ ವೀರಭದ್ರೇಶ್ವರ ಮತ್ತು ಸಂತೇಬಾಚಹಳ್ಳಿಯ ಪಡಲದಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ರು.
ದೇವಕಿ ನಾರಾಯಣಗೌಡರಿಗೆ ಅವರ ಪುತ್ರಿ ಲೀನಾಕರಣ್ ಸಾಥ್ ನೀಡಿದ್ರು.
ಸಂತೇಬಾಚಹಳ್ಳಿಯ ಗ್ರಾಮ ದೇವತೆ ಪಡಲದಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ರು. ಮುತ್ತೈದೆಯರಿಗೆ ಅರಿಶಿನ ಕುಂಕುಮ ಹಾಗೂ ಸೀರೆಯನ್ನು ವಿತರಿಸಿ ಆಶೀರ್ವಾದ ಪಡೆದುಕೊಂಡರು.