Select Your Language

Notifications

webdunia
webdunia
webdunia
webdunia

ಯಡಿಯೂರಪ್ಪರನ್ನು ಹೊಗಳಿ, ಹೆಚ್.ಡಿ.ಕೆ, ರೇವಣ್ಣಗೆ ಟಾಂಗ್ ನೀಡಿದ ಅನರ್ಹ ಶಾಸಕ

webdunia
ಮಂಗಳವಾರ, 5 ನವೆಂಬರ್ 2019 (18:30 IST)
ಸಿಎಂ ಬಿ.ಎಸ್.ಯಡಿಯೂರಪ್ಪ ರೈತ ನಾಯಕ, ರಾಜ್ಯದ ನೆರೆ ಪರಿಸ್ಥಿತಿ ನಿಭಾಯಿಸಿ ಅಭಿವೃದ್ಧಿಗೆ ದುಡಿಯುತ್ತಿರುವ ಧೀಮಂತ ನಾಯಕ ಅಂತೆಲ್ಲ ಅನರ್ಹ ಶಾಸಕರೊಬ್ಬರು ಹಾಡಿ ಹೊಗಳಿದ್ದಾರೆ.

ಮಂಡ್ಯದ ಬೂಕನಕೆರೆಯಲ್ಲಿ ಅನರ್ಹ ಶಾಸಕ ಡಾ.ನಾರಾಯಣಗೌಡರ ಅಭಿಮಾನಿಗಳು ಬೃಹತ್ ಸಭೆ ನಡೆಸಿದ್ರು. ಅನರ್ಹ ಶಾಸಕ ನಾರಾಯಣಗೌಡ ಮಾತನಾಡಿ, ತಾಲೂಕಿನ ಅಭಿವೃದ್ಧಿಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದೆ ಅಂತ ಹೇಳಿದ್ರು.
ನನ್ನ ಕ್ಷೇತ್ರದ ಅಭಿವೃದ್ಧಿಗೆ ಕಾಡಿ ಬೇಡಿ  ಬಿಡುಗಡೆ ಮಾಡಿಸಿದ ಅನುದಾನವನ್ನು ಹೊಳೆನರಸೀಪುರ, ಹಾಸನಕ್ಕೆ ರೇವಣ್ಣ  ತಗೊಂಡು ಹೋಗ್ತಿದ್ದರು.

ನನ್ನ ವಿರುದ್ಧ ತಾಲೂಕಿನ ನಾಲ್ವರು ಕಿಡಿಗೇಡಿಗಳು ಹೇಳ್ತಿದ್ದ ಚಾಡಿ ಮಾತನ್ನು ವರಿಷ್ಠರು ಕೇಳ್ತಿದ್ರು.
ಕೆ.ಆರ್.ಪೇಟೆ ಕ್ಷೇತ್ರಕ್ಕೆ 700 ಕೋಟಿ ಅನುದಾನ ನೀಡಿದ್ದೇನೆ ಎಂದು ಸುಳ್ಳು ಹೇಳಿದ ಕುಮಾರಸ್ವಾಮಿ, ಕೊನೆಗೆ 100 ಕೋಟಿ ಅನುದಾನವನ್ನೂ ಕೊಡಲಿಲ್ಲ.

ಆದ್ದರಿಂದ ಬೇಸತ್ತು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದೆ ಎಂದು ನಾರಾಯಣಗೌಡ ಹೇಳಿದರು.
ಯಡಿಯೂರಪ್ಪ ಅವರು ದೈವಭಕ್ತರು, ರಾಜ್ಯದ ಅಭಿವೃದ್ಧಿಗೆ ಹಗಲಿರುಳೆನ್ನದೇ ದುಡಿಯುತ್ತಿದ್ದಾರೆ ಎಂದರು.  Share this Story:

Follow Webdunia Hindi

ಮುಂದಿನ ಸುದ್ದಿ

ಸಂತ್ರಸ್ತರ ಆಕ್ರೋಶ ಕಟ್ಟೆ ಒಡೆದಾಗ ಅಲ್ಲಿ ಆಗಿದ್ದೇನು?