Publish Date: Tue, 05 Nov 2019 (17:09 IST)
Updated Date: Tue, 05 Nov 2019 (17:55 IST)
ಜೈಲಿಂದ ಡಿಕೆ ಶಿವಕುಮಾರ್ ಬೇಗ ಹೊರ ಬಂದಿರೋದಕ್ಕೆ ಸಿದ್ದರಾಮಯ್ಯಗೆ ಸಮಾಧಾನವಿಲ್ಲ.
ಹೀಗಂತ ಸಚಿವರೊಬ್ಬರು ಹೊಸ ಬಾಂಬ್ ಸಿಡಿಸಿದ್ದಾರೆ.
ಚಿತ್ರದುರ್ಗದಲ್ಲಿ ಆರೋಗ್ಯ ಮಂತ್ರಿ ಶ್ರೀರಾಮುಲು ಹೇಳಿಕೆ ನೀಡಿದ್ದು, ಆಡಿಯೋ ಲೀಕ್ ವಿಚಾರ ರಾಜ್ಯದಲ್ಲಿ ಬಹಳಷ್ಟು ಚರ್ಚೆ ಆಗುತ್ತಿದೆ. ಮೂಲವಾಗಿ ಲೀಕ್ ಯಾರು ಮಾಡಿದ್ದಾರೆ ಎಂದು ಹೊರ ಬರಬೇಕಿದೆ.
ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನ ಕೆಳಗಿಸಿ ಮುಂದೆ ಸಾಗುವವರು ಯಾರು ಇಲ್ಲ. ಆಡಿಯೋ, ವಿಡಿಯೋ ಕ್ಲೀಪ್ ನಕಲಿ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದ್ರು.
ಬಿಎಸ್ ವೈ ಒಪ್ಪಿಕೊಂಡಿರುವ ಒಪ್ಪದಿರುವ ಬಗ್ಗೆ ನಾನು ಮಾತನಾಡಲ್ಲ. ಅನೇಕ ಷಡ್ಯಂತ್ರಗಳು ಬಿಎಸ್ ವೈ ವಿರುದ್ಧ ನಡೆದಿವೆ. ಎಲ್ಲಾ ವಿಚಾರ ಹೈಕಮಾಂಡ್ ಸೂಕ್ಷ್ಮವಾಗಿ ನೋಡುತ್ತಿದೆ. ಈ ವಿಚಾರದಲ್ಲಿ ಕೆಲವೇ ದಿನಗಳಲ್ಲಿ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಹೇಳಿದ್ರು.
ಸಿದ್ದರಾಮಯ್ಯನವರಿಗೆ ಜಗಳ ಹಚ್ಚಿ ತಲೆಯಲ್ಲಿ ಹುಳ ಬಿಡಬೇಕೆಂದುಕೊಂಡಿದ್ದಾರೆ. ಹೀಗಾಗಿ ಬೊಮ್ಮಾಯಿ, ಸವದಿ ತಲೆಯಲ್ಲಿ ಹುಳ ಬಿಟ್ಟು ಜಗಳ ಆಗಬಹುದು ಎಂದುಕೊಂಡಿದ್ದಾರೆ. ನಮ್ಮ ಪಕ್ಷದಲ್ಲಿ ಆ ರೀತಿ ಇಲ್ಲ ಎಂದ್ರು.
ಸಿದ್ದರಾಮಯ್ಯನವರು ಡಿಕೆ ಶಿವಕುಮಾರ್ ಜೈಲಿನಲ್ಲಿ ಇರುತ್ತಾರೆ ಎಂದು ಭಾವಿಸಿದ್ದರು. ಹೀಗಾಗಿ ಕ್ಯಾಂಡಿಡೇಟ್ ಗಳನ್ನ ಪಟ್ ಅಂತ ಘೋಷಿಸಿದರು. ಜೈಲಿಂದ ಡಿಕೆ ಶಿವಕುಮಾರ್ ಬೇಗ ಬಂದಿದ್ದು, ಸಿದ್ದರಾಮಯ್ಯಗೆ ಸಮಾಧಾನವಿಲ್ಲ ಎಂದು ದೂರಿದ್ರು.