Select Your Language

Notifications

webdunia
webdunia
webdunia
webdunia

‘ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ದೊಡ್ಡ ಶನಿ’

‘ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ದೊಡ್ಡ ಶನಿ’
ಮಂಗಳೂರು , ಮಂಗಳವಾರ, 5 ನವೆಂಬರ್ 2019 (17:02 IST)
ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಜನಾರ್ಧನ ಪೂಜಾರಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸಿದ್ದರಾಮಯ್ಯ ಕಾಂಗ್ರೆಸ್ ಗೆ ಒಬ್ಬ ಶನಿ ಎಂದು ಜನಾರ್ಧನ ಪೂಜಾರಿ ಹೇಳಿಕೆ ನೀಡಿದ್ದಾರೆ.
ಸಿದ್ದರಾಮಯ್ಯನವರು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಶನಿ. ಅವರು ಈ ಪಕ್ಷವನ್ನ ಮುಗಿಸಿಯೇ ಹೋಗುವುದು. ಇದು ದೇವರಿಗೂ ಗೊತ್ತಿದೆ. ಅವರಿಗೆ ಹೆಚ್ಚು ಅಧಿಕಾರ ಕೊಡೋದು ದೊಡ್ಡ ತಪ್ಪು ಎಂದ್ರು.

ಆ ತಪ್ಪು ‌ಮತ್ತೆ ಮಾಡಬೇಡಿ ಅಂತ ಹೈಕಮಾಂಡ್ ಗೂ ಹೇಳ್ತೇನೆ. ಹೈಕಮಾಂಡ್ ದೊಡ್ಡ ತಪ್ಪು ‌ಮಾಡುತ್ತಿದೆ, ನಾನು ಹೊಸಬನಲ್ಲ. ಉಪಚುನಾವಣೆ ಬಗ್ಗೆ ಕಾದು ನೋಡುವ, ಇವರು ಬದುಕುವ ಲಕ್ಷಣ ಕಾಣುತ್ತಿಲ್ಲ ಅಂತ ಹರಿಹಾಯ್ದರು.

ಸಿದ್ದರಾಮಯ್ಯ ಇಷ್ಟರವರೆಗೆ ಎಲ್ಲಿದ್ದರು? ಈಗ ಅವರಿಗೆ ಮಂಗಳೂರಿನಲ್ಲಿ ಕಾಂಗ್ರೆಸ್ ಇದೆ ಅಂತ ಗೊತ್ತಾಗಿದೆ.

ಅವರು ಮಂಗಳೂರಿಗೆ ಬಂದು ಮಾತನಾಡಲಿ, ಮರುದಿನ ಅದಕ್ಕೆ ಉತ್ತರ ಕೊಡ್ತೇನೆ. ದಕ್ಷಿಣ ಕನ್ನಡ ಮತ್ತು ಉಡುಪಿ ವಿಧಾನಸಭೆ, ಲೋಕಸಭೆ ಕಾಂಗ್ರೆಸ್ ಸೋಲಿಗೆ ಹಿರಿಯರ ಕಡೆಗಣನೆ ಕಾರಣ. ಈ ಮಾತು ನೂರಕ್ಕೆ‌ ನೂರು ಸತ್ಯ, ಇದರಲ್ಲಿ ಸ್ವಲ್ಪವೂ ಸುಳ್ಳಿಲ್ಲ ಅಂತ ಹೇಳಿದ್ರು.



Share this Story:

Follow Webdunia kannada

ಮುಂದಿನ ಸುದ್ದಿ

ಅನರ್ಹ ಶಾಸಕರ ಪತ್ನಿಯಿಂದ ಟೆಂಪಲ್ ರನ್