ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ, ಮಾಜಿ ಸಿಎಂ ಸಿದ್ದರಾಮಯ್ಯನವರು ಸುಮಲತಾಗೆ ಟಿಕೆಟ್ ನಿರಾಕರಣೆ ಮಾಡಿದ್ದಾರೆ. ಆದರೆ ಈ ಕುರಿತು ನನಗಿನ್ನೂ ಅಧಿಕೃತ ಮಾಹಿತಿ ಬಂದಿಲ್ಲ ಅಂತ ಸುಮಲತಾ ಹೇಳಿದ್ದಾರೆ.
									
			
			 
 			
 
 			
					
			        							
								
																	ಮಂಡ್ಯದ ಬೇವಿನಹಳ್ಳಿಯಲ್ಲಿ ಸುಮಲತಾ ಹೇಳಿಕೆ ನೀಡಿದ್ದು, ಟಿಕೆಟ್ ನಿರಾಕರಣೆ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದರು. ನಿನ್ನೆಯಷ್ಟೇ ಮಂಡ್ಯ ಟಿಕೆಟ್ ಸುಮಲತಾಗಿಲ್ಲ ಅಂದಿದ್ದರು ಸಿದ್ದರಾಮಯ್ಯ. ಈ ಕುರಿತು ಅಧಿಕೃತವಾಗಿ ನನಗಿನ್ನೂ ಮಾಹಿತಿ ಬಂದಿಲ್ಲ. ಅದು ಬರುವವರೆಗೂ ಕಾಯ್ತೀನಿ ಎಂದರು.
									
										
								
																	ಮಂಡ್ಯದ ಜೊತೆ ನಮಗೆ ಋಣಾನುಬಂಧ ಇದೆ. ಅದನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಎಲ್ಲರ ಅಭಿಪ್ರಾಯವೂ ಇದೇ ಆಗಿದೆ. ಕಾಂಗ್ರೆಸ್‌ಗೆ ಮಂಡ್ಯವೇ ಬೇಡವ ಅಂತ ಕಾರ್ಯಕರ್ತರು ಕೇಳ್ತಿದ್ದಾರೆ ಎಂದರು.
									
											
							                     
							
							
			        							
								
																	ಸ್ಯಾಂಡಲ್‌ವುಡ್ ಯಾರ ಪರ ನಿಲ್ಲಬೇಕೆಂಬ ಚರ್ಚೆ ಕುರಿತು ಮಾತನಾಡಿದ ಅವರು, ಇದು ಟಿವಿ ಚಾನೆಲ್‌ಗಳಲ್ಲಷ್ಟೇ ಚರ್ಚೆಯಾಗ್ತಿದೆ. ಚರ್ಚೆಯಲ್ಲಿ ಯಾವ ಸ್ಯಾಂಡಲ್‌ವುಡ್ ನಟ ನಟಿಯರು ಭಾಗವಹಿಸಿಲ್ಲ. ಧೈರ್ಯವಾಗಿರಿ ಅವರೆಲ್ಲಾ ನನ್ನ ಪರವಾಗಿದ್ದಾರೆ ಎಂದು ಸುಮಲತಾ ಹೇಳಿದ್ದಾರೆ.