Select Your Language

Notifications

webdunia
webdunia
webdunia
webdunia

ಟಾರ್ಗೆಟ್ ಸುಮಲತಾ ಅಂಬರೀಶ್?

ಟಾರ್ಗೆಟ್ ಸುಮಲತಾ ಅಂಬರೀಶ್?
ಮಂಡ್ಯ , ಮಂಗಳವಾರ, 5 ಮಾರ್ಚ್ 2019 (15:36 IST)
ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವೆ ಎಂದಿರುವ ಸುಮಲತಾ ಅಂಬರೀಶ್ ಗೆ ಭಾವನಾತ್ಮಕವಾಗಿ ಕಟ್ಟಿಹಾಕಲು ಜೆಡಿಎಸ್ ಸಿದ್ಧವಾಗಿದೆ.

ಸುಮಲತಾರನ್ನು ಭಾವನಾತ್ಮಕವಾಗಿ ಕಟ್ಟಿಹಾಕಲು ಜೆಡಿಎಸ್ ಯತ್ನ ನಡೆಸುತ್ತಿದೆ ಎನ್ನಲಾಗಿದೆ. ದಿ.ಅಂಬರೀಶ್ ಪತ್ನಿ ಸುಮಲತಾ ಅವ್ರಿಗೆ ಜೆಡಿಎಸ್ ಬಹಿರಂಗ ಪ್ರಶ್ನೆಗಳನ್ನು ಹಾಕಿದೆ.

ಸಾಮಾಜಿಕ ಜಾಲತಾಣದ ಮುಖಾಂತರ ಪ್ರಶ್ನೆಗಳ ಸುರಿಮಳೆಗೆ ಪರ ವಿರೋಧ ಚರ್ಚೆಗಳು ಶುರುವಾಗಿವೆ.  
ಅಂಬರೀಶ್ ಅಭಿಮಾನಿಗಳು, ಮಂಡ್ಯದ ಅಖಂಡ ಜನತೆ ಹೆಸರಲ್ಲಿ ಜೆಡಿಎಸ್ ಕಾರ್ಯಕರ್ತರು ಪ್ರಶ್ನೆ ಕೇಳುತ್ತಿದ್ದಾರೆ.  ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ದತೆ ನಡೆಸುತ್ತಿರುವ ಸುಮಲತಾ ಅಂಬರೀಶ್ ಗೆ ರಾಜಕೀಯ ಎಂಟ್ರಿ ವಿರೋಧಿಸಿ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಪದೇ ಪದೇ ಅಂಬರೀಶ್ ಹೆಸರು ಬಳಸಿ ಪ್ರಶ್ನೆ ಹಾಕಿರೋ ಜೆಡಿಎಸ್ ಕಾರ್ಯಕರ್ತರು, ಸುಮಲತಾಗೆ ಕೇಳಿರುವ ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಪ್ರಶ್ನೆ 1. ಅಂಬರೀಶಣ್ಣ ಬದುಕಿದ್ದಾಗ ನನ್ನ ಕುಟುಂಬಸ್ಥರನ್ನು ರಾಜಕೀಯಕ್ಕೆ ಕರೆತರುವುದಿಲ್ಲ‌ ಎಂದಿದ್ದರು.
ಅವರ ಮಾತಿಗೆ ನೀವು ಕಿಂಚಿತ್ತೂ ಬೆಲೆ ಕೊಡುವುದಿಲ್ಲವ ಸುಮಲತಾ ಅಕ್ಕ..?

ಪ್ರಶ್ನೆ 2. ಕಳೆದ ಚುನಾವಣೆಯಲ್ಲಿ ಬಿ-ಫಾರಂ ಮನೆ ಬಾಗಿಲಿಗೆ ಬಂದರೂ ರಾಜಕೀಯದಿಂದ ಬೇಸತ್ತ ಅಂಬರೀಶಣ್ಣ ಚುನಾವಣೆಯಿಂದ ದೂರುಳಿದಿದ್ದರು. ಅಂಬರೀಶ್ ಅವರ ಆ ನಡೆ ಮರೆತುಹೊಯ್ತ ಸುಮಲತಾ ಅಕ್ಕ..?

ಪ್ರಶ್ನೆ 3. ಅಂಬರೀಶ್ ಅವ್ರಿಗೆ ಬೇಡವಾದ ರಾಜಕೀಯ ನಿಮಗೇಕೆ..? ಮಂಡ್ಯ ಜನರ ಋಣ ತೀರಿಸಲು ರಾಜಕೀಯ ಬೇಕ..?

ಮಂಡ್ಯ ಜನರ ಋಣ ತೀರೀಸಲು NGO ಸಂಸ್ಥೆ ತೆರೆದು ಮಂಡ್ಯ ಜನತೆಗೆ ಸಹಾಯ ಮಾಡಲಾಗಲ್ವ ಸುಮಲತಾ ಅಕ್ಕ..?

ಪ್ರಶ್ನೆ 4. ಅಂಬರೀಶ್ ನಿಧನರಾದಾಗ ಮುಖ್ಯಮಂತ್ರಿ ಅನ್ನೋದನ್ನು ಮರೆತು ಕುಮಾರಣ್ಣ ಸಾಮಾನ್ಯ ಅಭಿಮಾನಿಯಂತೆ ಮಂಡ್ಯ ಜನರಿಗೆ ಅಂಬರೀಶ್ ಅಣ್ಣನ‌ ಅಂತಿಮ ದರ್ಶನ ಮಾಡಿಸಿದ್ರು. ಇದನ್ನ ನೀವು ಮರೆತರೂ ಮಂಡ್ಯ ಜನ‌ ಮರೆಯೋದಿಲ್ಲ ಸುಮಲತಾ ಅಕ್ಕ..?

ಪ್ರಶ್ನೆ 5. ಅಂಬರೀಶ್ ಅಣ್ಣನ ಹೆಸರಿನಲ್ಲಿ ಮೈಸೂರಿನಲ್ಲಿ ಫಿಲ್ಮ್ ಸಿಟಿ ಕಟ್ಟಬೇಕು ಎಂದ ಕುಮಾರಣ್ಣನ ಗೆಲ್ಲಿಸಬೇಕೋ..?
ಅಥವಾ ಅಂಬಿ ಅಣ್ಣ ನಮ್ಮನ್ನೆಲ್ಲಾ ಅಗಲಿ ತಿಂಗಳು ಕಳೆಯುವ ಮುನ್ನ ಅಣ್ಣನ ಅಗಲಿಕೆಯನ್ನೇ ಬಂಡವಾಳ ಮಾಡಿಕೊಂಡ ನಿಮ್ಮನ್ನ ಗೆಲ್ಲಿಸಬೇಕೋ..? ನೇರವಾಗಿ ಹೇಳಿ ಸುಮಲತಾ ಅಕ್ಕ..?




Share this Story:

Follow Webdunia kannada

ಮುಂದಿನ ಸುದ್ದಿ

ಮಲ್ಲಿಕಾರ್ಜುನ ಖರ್ಗೆಗೆ ಟಾಂಗ್ ನೀಡಿದ ಜಾಧವ್