Publish Date: Tue, 05 Mar 2019 (07:36 IST)
Updated Date: Tue, 05 Mar 2019 (07:38 IST)
ಮಂಡ್ಯ : ಮನೆಗೆ ನುಗ್ಗಿ ದರೋಡೆ ಮಾಡಲು ಆಗದ ದುಷ್ಕರ್ಮಿಗಳು ಮನೆಯ ಕಂಪೌಂಡ್ ನಾಶಪಡಿಸಿದ ಘಟನೆ ಭಾನುವಾರ ತಡರಾತ್ರಿ 12.30 ರ ಸಮಯದಲ್ಲಿ ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ಸೊಳ್ಳೇಪುರ ಸಮೀಪ ತೋಟದ ಮನೆಯಲ್ಲಿ ನಡೆದಿದೆ.
ಸರಕಾರಿ ಆಸ್ಪತ್ರೆಯ ವೈದ್ಯೆ ಡಾ.ಹರ್ಷವರ್ದಿನಿ ಹಾಗೂ ಬ್ಯಾಂಕ್ ಉದ್ಯೋಗಿ ಗಿರಿಪ್ರಸಾದ್ ಅವರ ತೋಟದ ಮನೆಗೆ ನುಗ್ಗಿದ ದುಷ್ಕರ್ಮಿಗಳ ಗುಂಪೊಂದು ದರೋಡೆಗೆ ಯತ್ನಿಸಿದೆ. ಆದರೆ ಆ ವೇಳೆ ಅವರಿಗೆ ದರೋಡೆ ಮಾಡಲು ಆಗದೇ ಇರುವುದಕ್ಕೆ ಕೋಪಗೊಂಡು ಮನೆಯ ಕಂಪೌಂಡನ್ನು ಟ್ರ್ಯಾಕ್ಟರ್ ಬಳಸಿ ಬೀಳಿಸಿದ್ದಾರೆ. ಅಲ್ಲದೆ ಮನೆ ಎದುರು ನಿಲ್ಲಿಸಿದ್ದ ಎರಡು ಬೈಕ್ ಹಾಗೂ ಕಾರನ್ನು ಜಖಂಗೊಳಿಸಿ ಪರಾರಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಕಿಕ್ಕೇರಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದುಷ್ಕರ್ಮಿಗಳ ಗುಂಪಿನಲ್ಲಿದ್ದ ಓರ್ವನನ್ನು ಬಂಧಿಸಿದ ಪೊಲೀಸರು ಕಂಪೌಂಡ್ ನಾಶಕ್ಕೆ ಬಳಸಿದ ಟ್ರ್ಯಾಕ್ಟರನ್ನು ವಶಪಡಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.