Publish Date: Tue, 05 Mar 2019 (07:33 IST)
Updated Date: Tue, 05 Mar 2019 (07:35 IST)
ಬೆಂಗಳೂರು : : ಶಾಸಕ ರಾಮಲಿಂಗಾ ರೆಡ್ಡಿ ಅವರ ಸೋದರ ಸಂಬಂಧಿ ಎಂದು ಹೇಳಿಕೊಂಡು ಸ್ಯಾಂಡಲ್ ವುಡ್ ನಟನೊಬ್ಬ ತಾನು ವಾಸವಿದ್ದ ಮನೆಯ ಮಾಲೀಕನಿಗೆ ಲಕ್ಷಾಂತರ ರೂಪಾಯಿ ವಂಚಿಸಿದ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.
ನಟ ಮನೋಜ್ ಮಾಲೀಕನಿಗೆ ವಂಚಿಸಿದಾತ. ಈತ ನಿರ್ದೇಶಕ ಗುರು ಎಂಬುವವರ ಜೊತೆ ಸೇರಿ ಮನೆಯ ಮಾಲೀಕ ಪ್ರಕಾಶ್ ಎಂಬುವರಿಗೆ ಚಿತ್ರವೊಂದನ್ನು ನಿರ್ಮಿಸಿ ಕೊಡುವುದಾಗಿ ಹೇಳಿ 13 ಲಕ್ಷ ರೂ ಹೂಡಿಕೆ ಮಾಡಿಸಿದ್ದಾರೆ. ಅಲ್ಲದೇ ಮನೆಯ ಬಾಡಿಗೆ ಕೂಡ ನೀಡಿರಲಿಲ್ಲ.
ಈ ಹಿನ್ನಲೆಯಲ್ಲಿ ಮಾಲೀಕ ಹಣ ವಾಪಸ್ ಕೇಳಿದರೆ ಅವರಿಗೆ ಜೀವ ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ಪ್ರಕಾಶ್ ಅವರು ನಟ ಹಾಗೂ ನಿರ್ದೇಶಕನ ವಿರುದ್ಧ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.