Publish Date: Wed, 06 Mar 2019 (19:11 IST)
Updated Date: Wed, 06 Mar 2019 (19:13 IST)
ಪೊಲೀಸರೊಂದಿಗೆ ಭಕ್ತರು ಕೆಂಡದಂತಾಗಿ ಕೆಂಡವನ್ನು ಹಾಯ್ದಿರುವ ಘಟನೆ ನಡೆದಿದೆ.
ಮಲೆಮಹದೇಶ್ವರದಲ್ಲಿ ಕೊಂಡ ಹಾಯಲು ಪೊಲೀಸರ ಅಡ್ಡಿ ಪಡಿಸಿರುವ ನಡುವೆಯೇ ಭಕ್ತರು ಕೆಂಡ ಹಾಯ್ದಿರುವ ಘಟನೆ ನಡೆದಿದೆ. ಕೆಂಡ ಹಾಯಲು ಅವಕಾಶ ನೀಡದ ಪೊಲೀಸ್ ಮತ್ತು ಪ್ರಾಧಿಕಾರದ ವಿರುದ್ಧ ಭಕ್ತರು ಆಕ್ರೋಶ ವ್ಯಕ್ತಪಡಿಸಿದರು.
ಅಮಚವಾಡಿ ಗ್ರಾಮದಿಂದ ಪರಿಷೆ ಹೋಗಿದ್ದ ಭಕ್ತರು ಆಯೋಜಿಸಿದ್ದ ಕೊಂಡದ ಬಳಿ ಈ ಘಟನೆ ನಡೆದಿದೆ. ಪ್ರತಿಬಾರಿ ಈ ಆಚರಣೆ ಮಾಡಿಕೊಂಡು ಬರುತ್ತಿದ್ದ ಭಕ್ತರಿಗೆ ಈ ಆಚರಣೆ ಬೇಡ ಎಂದು ಅನುಮತಿ ನೀಡದ ಪ್ರಾಧಿಕಾರ ಜನರ ಆಕ್ರೋಶಕ್ಕೆ ಕಾರಣವಾಯಿತು.
ಪ್ರಾಧಿಕಾರದ ಅನುಮತಿಯನ್ನೂ ಲೆಕ್ಕಿಸದೆ ಕೊಂಡ ಹಾಯ್ದ ಭಕ್ತರು ತಮ್ಮ ಹರಕೆ ತೀರಿಸಿದರು. ಉರಿವ ಬೆಂಕಿಯ ಮಧ್ಯ ಕೊಂಡ ಹಾಯ್ದ ಮಾದಪ್ಪನ ಭಕ್ತರು ತಮ್ಮ ಭಕ್ತಿಯನ್ನು ಸಮರ್ಪನೆ ಮಾಡಿದರು.