Select Your Language

Notifications

webdunia
webdunia
webdunia
webdunia

ಸುಮಲತಾ, ನಿಖಿಲ್ ಸ್ಪರ್ಧೆಗೆ ವಿರೋಧ; ಬಹಿರಂಗ ಚರ್ಚೆಗೆ ಬರಲು ಪಟ್ಟು!

ಸುಮಲತಾ, ನಿಖಿಲ್ ಸ್ಪರ್ಧೆಗೆ ವಿರೋಧ; ಬಹಿರಂಗ ಚರ್ಚೆಗೆ ಬರಲು ಪಟ್ಟು!
ಮಂಡ್ಯ , ಬುಧವಾರ, 6 ಮಾರ್ಚ್ 2019 (18:47 IST)
ಮಂಡ್ಯದಿಂದ ಸುಮಲತಾ, ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗೆ ವಿರೋಧ ವ್ಯಕ್ತವಾಗುತ್ತಿದೆ.
ಕರ್ನಾಟಕ ಪ್ರಗತಿಪರ ಸಂಘಟನೆಯಿಂದ ಪ್ರತಿಭಟನೆ ನಡೆದಿದ್ದು, ಮಂಡ್ಯದಲ್ಲಿ ಸುಮಲತಾ, ನಿಖಿಲ್ ಸ್ಪರ್ಧೆ ಮಾಡಬಾರದೆಂದು ಒತ್ತಾಯ ಮಾಡುತ್ತಿದ್ದಾರೆ.

ಮಂಡ್ಯದ ಕೆ.ವಿ.ಶಂಕರಗೌಡ ಪ್ರತಿಮೆ ಎದುರು ನಡೆದ ಪ್ರತಿಭಟನೆಯಲ್ಲಿ ಸುಮಲತಾ, ನಿಖಿಲ್ ಇಬ್ಬರಿಗೂ ಮಂಡ್ಯದ ಸಮಸ್ಯೆಗಳ ಅರಿವಿಲ್ಲ. ಸಮಸ್ಯೆಗಳ ಅರಿವಿಲ್ಲದವರಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಮಂಡ್ಯ ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ ಎಂದರು.

ಅನುಕಂಪ ಹಾಗೂ ಕುಟುಂಬದ ಪ್ರಭಾವದ ಲಾಭ ಪಡೆದುಕೊಳ್ಳಲು ಇಬ್ಬರೂ ಬಂದಿದ್ದಾರೆ ಎಂದು ಟೀಕಿಸಿರುವ ಪ್ರತಿಭಟನಾಕಾರರು, ಸಮಸ್ಯೆಗಳನ್ನು ಅರಿತ ಸ್ಥಳೀಯರಿಗೆ ಅವಕಾಶ ನೀಡಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಬೇಕು ಎಂದಿದ್ದಾರೆ.
ಸುಮಲತಾ ಹಾಗೂ ನಿಖಿಲ್ ಸ್ಪರ್ಧೆಗೂ ಮೊದಲು ಬಹಿರಂಗ ಚರ್ಚೆಗೆ ಬರಬೇಕು. ಇಲ್ಲಿನ ಸಮಸ್ಯೆಗಳ ಬಗ್ಗೆ ಅವರಿಗೆ ಇರುವ ಅರಿವಿನ ಬಗ್ಗೆ ಮಂಡ್ಯ ಜನರಿಗೆ ತಿಳಿಯಲಿ ಎಂದು ಒತ್ತಾಯ ಮಾಡಿದ್ದಾರೆ.  




Share this Story:

Follow Webdunia kannada

ಮುಂದಿನ ಸುದ್ದಿ

ಸುಮಲತಾ ಅಂಬರೀಶ್ ಪಕ್ಷೇತರ ಅಭ್ಯರ್ಥಿ?