Select Your Language

Notifications

webdunia
webdunia
webdunia
webdunia

ಸುಮಲತಾ ಅಂಬರೀಶ್ ಪಕ್ಷೇತರ ಅಭ್ಯರ್ಥಿ?

ಸುಮಲತಾ
ಸುಮಲತಾ ಅಂಬರೀಶ್ ಪಕ್ಷೇತರ ಅಭ್ಯರ್ಥಿ. ಹೀಗಂತ ಘೋಷಣೆ ಮಾಡಿದವರು ಯಾರು ಗೊತ್ತಾ?

ಚುನಾವಣೆಗೂ ಮುನ್ನವೇ ಸುಮಲತಾ ಮಂಡ್ಯ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದೆ.  ಪಕ್ಷೇತರ ಅಭ್ಯರ್ಥಿಯಾಗಿ ಬಿಂಬಿಸಿದ ಅಂಬಿ-ದರ್ಶನ್ ಅಭಿಮಾನಿಗಳು ಕಟೌಟ್ ಗಳನ್ನು ಕಟ್ಟಿದ್ದಾರೆ. 

ತಡಗವಾಡಿ ಗ್ರಾಮದ ಅಂಬಿ-ದರ್ಶನ್ ಅಭಿಮಾನಿಗಳು, ಗ್ರಾಮದಲ್ಲಿ ಫ್ಲೆಕ್ಸ್ ಹಾಕಿದ್ದಾರೆ. ಅದರಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾಗೆ ಸ್ವಾಗತ ಎಂದು ಬರೆದಿದ್ದಾರೆ. ಸ್ವಾಗತ ಕೋರಿ ಅಳವಡಿಸಿರುವ ಫ್ಲೆಕ್ಸ್ ನ ವಿಷಯ ಚರ್ಚೆಗೆ ಕಾರಣವಾಗಿದೆ.  

ಸುಮಲತಾ ಜೊತೆಗೆ ರಾರಾಜಿಸುತ್ತಿರುವ ದರ್ಶನ್, ಅಂಬರೀಶ್, ಅಭಿಮಾನಿಗಳ ಭಾವ ಚಿತ್ರಗಳು ಕುತೂಹಲ ಹುಟ್ಟಿಸಿವೆ.




Share this Story:

Follow Webdunia kannada

ಮುಂದಿನ ಸುದ್ದಿ

ಕಾರ್ಪೊರೇಟರ್ ಬಂಧನ ಮಾಡಬೇಕಂತೆ…!