ಬೆಂಗಳೂರು : ಕೆ ಸುಧಾಕರ್ ಹೇಳಿಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಸುಧಾಕರ್ಗೆ ಅಧಿಕಾರದ ಮದ. ಹಾಗಾಗಿ ದುರಹಂಕಾರದಲ್ಲಿ ಮಾತನಾಡುತ್ತಿದ್ದಾರೆ ಅಂತ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ಅಧಿಕಾರವನ್ನು ಸುಧಾಕರ್ ಶಾಶ್ವತ ಅಂದುಕೊಂಡಿದ್ದಾರೆ. 2023ಕ್ಕೆ ಅವರೆಲ್ಲರೂ ಮನೆಗೆ ಹೋಗುತ್ತಾರೆ. ಆಗ ಯಾರು ಜೈಲಿಗೆ ಹೋಗುತ್ತಾರೆಂದು ಗೊತ್ತಾಗುತ್ತದೆ ಅಂತ ರಮೇಶ್ಕುಮಾರ್ರನ್ನು ಜೈಲಿಗೆ ಕಳಿಸುತ್ತೇನೆಂಬ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಇನ್ನು ನಳಿನ್ ಕುಮಾರ್ ಕಟೀಲು ಅಪ್ರಬುದ್ಧ ರಾಜಕಾರಣ. ಕಟೀಲು ಒಬ್ಬ ಜೋಕರ್, ಅವನ ತಲೆ ಕೆಟ್ಟಿದೆ. ಹತಾಶರಾದಾಗ ಮಾತ್ರ ಅವಾಚ್ಯ ಶಬ್ದಗಳನ್ನ ಬಳಸುತ್ತಾರೆ. ನಾನು ಸಿ.ಎಂ.ಇಬ್ರಾಹಿಂ ಬಗ್ಗೆ ಏನೂ ಮಾತನಾಡಲ್ಲ ಅಂತ ಬೆಂಗಳೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ಬಿಜೆಪಿ, ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ ಸಿದ್ದರಾಮಯ್ಯ, ಜೆಡಿಎಸ್ನವರಿಗೆ ಯಾವುದೇ ಗಟ್ಟಿ ಸಿದ್ಧಾಂತಗಳು ಇಲ್ಲ. ಅವರು ಏನೇ ಓಲೈಕೆ ಮಾಡಿದರು ಅದು ನಡೆಯುವುದಿಲ್ಲ. ಅಲ್ಪಸಂಖ್ಯಾತರು ಬುದ್ಧಿವಂತರಿದ್ದಾರೆ. ಬಿಜೆಪಿಯನ್ನು ಅಧಿಕಾರಕ್ಕೆ ಬರುವುದಕ್ಕೆ ಬಿಡುವುದಿಲ್ಲ. ಬಿಜೆಪಿ ಜತೆ ಸೇರಿ ಸರ್ಕಾರ ಮಾಡಿದವರು ಜ್ಯಾತ್ಯತೀತರಾ? ಜೆಡಿಎಸ್ ಜ್ಯಾತ್ಯತೀತ ಪಕ್ಷವಲ್ಲ. ಜೆಡಿಎಸ್ ವಿರುದ್ಧ ಮಾಜಿ ಸಿಎಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.