Select Your Language

Notifications

webdunia
webdunia
webdunia
webdunia

ಪ್ರೀತಿಸಿ ಮದುವೆಯಾಗಿದ್ದ ಸಬ್ ಇನ್ಸ್ಪೆಕ್ಟರ್ ಹೆಂಡತಿ ‌ಆತ್ಮಹತ್ಯೆ

Sub-inspector's wife who was married to love committed suicide
ಚಿಕ್ಕಬಳ್ಳಾಪುರ , ಶನಿವಾರ, 3 ಜೂನ್ 2023 (20:10 IST)
ಪ್ರೀತಿಸಿ ಮದುವೆಯಾಗಿದ್ದ ಸಬ್ ಇನ್ಸ್ಪೆಕ್ಟರ್ ಹೆಂಡತಿ ‌ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೇಗೂರಿನ ಪಟೇಲ್‌ ಬಡಾವಣೆಯಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರದ ವಿ ಗೊಲ್ಲಹಳ್ಳಿಯ ನಿವಾಸಿಯಾಗಿದ್ದ ಶಿಲ್ಪಾ ಚಿಂತಾಮಣಿ ಮೂಲದ  ಪಿಎಸ್ ಐ ರಮೇಶ್ ಅವರನ್ನ ಪ್ರೀತಿಸಿ ಮದುವೆಯಾಗಿದ್ರು. ಇಬ್ಬರು ಕೂಡ ಕಾಲೇಜು ದಿನಗಳಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ರು ಮದುವೆ ಕೂಡ ಆಗಬೇಕು ಅನ್ನಕೊಂಡಿದ್ರು ಅದು ಯಾವಾಗ ಶಿಲ್ಪಾ ಪರಿಶಿಷ್ಟ ಜಾತಿಗೆ ಸೇರಿದ್ದವಳು ಎಂದು ಗೊತ್ತಾಯ್ತೋ ಆವಾಗನಿಂದ ಅವೈಡ್ ಮಾಡೋಕೆ ಶುರುಮಾಡಿದ್ದ ಆದ್ರು ಕೂಡ ಪಟ್ಟುಬಿಡದ  ಶಿಲ್ಪಾ ಮನೆಗೆ ಕರೆದುಕೊಂಡು ‌ಹೋಗಿ ಒಪ್ಪಿಸಿದ್ಲು. ಇನ್ನೂ ಪ್ರೊಬೆಷನರಿಯಾಗಿದ್ದ ರಮೇಶ್ ಬೇಗೂರು ಠಾಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ನೇಮಕವಾಗಿದ್ರು.ಇತ್ತ ಜಾತಿಯ ನೆಪವೊಡ್ಡಿ ಶಿಲ್ಪಾ ಳನ್ನ ಅವೈಡ್ ಮಾಡಿದ್ದ ಠಾಣೆಯಲ್ಲಿ ಹಿರಿಯ ಅಧಿಕಾರಿಗಳು ಮನವೋಲಿಸಿ ಸಬ್ ರಿಜಿಸ್ಟ್ರಾರ್ ಆಪೀಸ್ ನಲ್ಲಿ ಮದುವೆ ಮಾಡಿಸಿದ್ರು ಆದ್ರೂ ಕೂಡ ನಮ್ಮ ಮನೆಯಲ್ಲಿ ಒಪ್ಪೋದಿಲ್ಲ ಎಂದು ಬೇರೆ ಮನೆ ಮಾಡಿಯಿಟ್ಟಿದ್ರಂತೆ .ನಮ್ಮ ಅಕ್ಕನ ಮಗಳನ್ನ ಮದುವೆ ಮಾಡಿಕೊಳ್ಳಲು ಮನೆಯಲ್ಲಿ ಒತ್ತಾಯ ಮಾಡುತ್ತಿದ್ದಾರೆ ನಿನಗೆ ಒಂದಿಷ್ಟು ಹಣ ಕೊಡುತ್ತೇನೆ ನನ್ನನ ಬಿಟ್ಟು ಬಿಡು ಎಂದು ಪ್ರತಿದಿನ ಮಾನಸಿಕ‌ ಹಿಂಸೆ ನೀಡುತ್ತಿದ್ದನಂತೆ. ನಿನ್ನೆ ಕೂಡ ಹೀಗೆ ಮಾಡಿದ್ದಾನೆಂದು ಮನೆಯವರಿಗೆ ಕಾಲ್ ಮಾಡಿದ್ದ ಶಿಲ್ಪಾ. ಇಂದು‌ ಬೆಳಗ್ಗೆ ಮನೆಯ ಬಾಗಿಲು ತೆಗೆಯದಿದ್ದಾಗ ಗಾಬಾರಿಯಾದ ಮನೆಯ ಓನರ್ ಕಾಲ್ ಮಾಡಿ ತಿಳಿಸಿದ್ದಾರೆ ಇನ್ನೂ ಮನೆಯ ಹತ್ತಿರ ಬಂದು ನೋಡಿದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಘಟನೆ ಸಂಬಂದ ಬೇಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಾಲಿಬಾಲ್ ಕ್ರೀಡಾಪಟುಗಳಿಗೆ ನೆರವಾದ ಕಾರ್ಮಿಕ ಸಚಿವ ಸಂತೋಷ್ ಲಾಡ್