Select Your Language

Notifications

webdunia
webdunia
webdunia
webdunia

ಬಿಜೆಪಿ ಸರ್ಕಾರ ಅರ್ಜಿದಾರರನ್ನ ಬೀದಿ ಪಾಲು ಮಾಡಿದೆ- ಮಹಾದೇವಪ್ಪ

The BJP government has made the petitioners share the streets
bangalore , ಶನಿವಾರ, 3 ಜೂನ್ 2023 (18:05 IST)
ಪಿಟಿಸಿಎಲ್ ಕಾಯ್ದೆ‌ತಿದ್ದು‌ ಪಡಿಗಾಗಿ  ಆಗ್ರಹಿಸಿ ದಲಿತ ಸಂಘಟನೆ 153ದಿನಗಳಿಂದ ಪ್ರಿಡಂ ಪಾರ್ಕ್ ನಲ್ಲಿ  ಹೋರಾಟ ನಡೆಸುತ್ತಿದ್ರು.ಹೋರಾಟ‌ ಸ್ಥಳಕ್ಕೆ ಸಮಾಜಕಲ್ಯಾಣ ಸಚಿವ ಎಚ್ ಸಿ ಮಹಾದೇವಪ್ಪ ಭೇಟಿ ನೀಡಿ ಪ್ರತಿಭಟನಾ ಕಾರರಿಗೆ ಸಾಥ್ ನೀಡಿದ್ರು.
 
ಅಲ್ಲದೇ ಈ ವೇಳೆ ಮಾತನಾಡಿದ ಮಹಾದೇವಪ್ಪ ಅತ್ಯಂತ ಕ್ರಾಂತಿಕಾರಕ ವಿಷಯ .ಬಹಳ ದಿನದಿಂದ ಅರ್ಜಿಗಳು ಪೆಂಡಿಂಗ್ ಇದೆ.ಬಿಜೆಪಿ ಸರ್ಕಾರ ಅರ್ಜಿದಾರರನ್ನ ಬೀದಿ ಪಾಲು ಮಾಡಿದೆ.ನಾವು ಚುನಾ‌ವಣೆವೇಳೆ ಹೇಳಿದ್ದೆವು .ಇದು ದಲಿತರ ಅಳಿವು ಉಳಿವಿನ ಪ್ರಶ್ನೆ.ಆದಷ್ಟು ಬೇಗ ನಾವು ಇದನ್ನ ಸರಿಪಡಿಸುತ್ತೇವೆ ಎಂದು ಮಹಾದೇವಪ್ಪ ಹೇಳಿದ್ರು.
 
ಬಾಬಸಾಹೇಬರ ಚಿಂತನೆ ಯನ್ನ ಕಾಂಗ್ರೆಸ್ ಅನುಷ್ಠಾನ ಮಾಡ್ತಾನೆ ಬಂದಿದೆ.ಪಿಟಿಸಿಎಲ್ ಕಾಯ್ದೆ ಬಗ್ಗೆ ಮುಖ್ಯಮಂತ್ರಿ ಬಳಿ ನಿನ್ನೆಯೇ ಮಾತಾಡಿದ್ದೇನೆ‌.ನಿಮ್ಮ ಹೋರಾಟಕ್ಕೆ ಜಯ ಸಿಗ್ಬೇಕು ಎಂದು ಮನವಿ ಮಾಡಿದ್ಧೇನೆ.ಕಂದಾಯ ಮಂತ್ರಿ ಬಳಿ ಮಾತನಾಡ್ತೇನೆ ಎಂದು ಮಹಾದೇವಪ್ಪ ಹೇಳಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕದವರಿಗೆ ಯಾವುದೇ ಹಾನಿ ಆಗಿರೋ ಬಗ್ಗೆ ಮಾಹಿತಿ ಇಲ್ಲ -ಸಿಎಂ