ಮೊಹರಂ ಮೆರವಣಿಗೆಯಲ್ಲಿ ಕಲ್ಲು ತೂರಾಟ

ಭಾನುವಾರ, 23 ಸೆಪ್ಟಂಬರ್ 2018 (17:55 IST)
ಮೊಹರಂ ಮೆರವಣಿಗೆಯಲ್ಲಿ ಕಲ್ಲು ತೂರಾಟ ನಡೆದ ಘಟನೆ ವರದಿಯಾಗಿದೆ.

ಮೆರವಣಿಗೆಯಲ್ಲಿ ಕುಣಿತಕ್ಕಾಗಿ ಪ್ರಾರಂಭವಾದ ಗಲಾಟೆಯಲ್ಲಿ 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.  ಪರಿಸ್ಥಿತಿ ನಿಯಂತ್ರಣ ಮಾಡಲು ಹೋದ ಪೊಲೀಸರ ಮೇಲು ಕಲ್ಲು ತೂರಾಟ ನಡೆಸಲಾಗಿದೆ.
ಹೀಗಾಗಿ ರಾತ್ರಿಯಿಂದ ಗ್ರಾಮದಲ್ಲಿ ಬಿಡುಬಿಟ್ಟಿರುವ ಪೋಲಿಸರು ಶಾಂತಿ ಕಾಪಾಡಲು ಯತ್ನಿಸುತ್ತಿದ್ದಾರೆ. ಗಾಯಗೊಂಡ ಹಲವು ಗಾಯಾಳುಗಳು ಜಿಲ್ಲಾಸ್ಪತ್ರೆಗೆ ದಾಖಲು ಆಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಗ್ರಾಮದಲ್ಲಿ ಇನ್ನು ಭೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ ಇದೆ. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕಣಜಿ ಗ್ರಾಮದಲ್ಲಿ ಘಟನೆ ನಡೆದಿದೆ.ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ದಸರೆ ಈ ಬಾರಿ ರಾಜಮನೆತನಕ್ಕೆ ಬಹು ವಿಶೇಷ ಯಾಕೆ ಗೊತ್ತಾ?