ದಸರೆ ಈ ಬಾರಿ ರಾಜಮನೆತನಕ್ಕೆ ಬಹು ವಿಶೇಷ ಯಾಕೆ ಗೊತ್ತಾ?

ಭಾನುವಾರ, 23 ಸೆಪ್ಟಂಬರ್ 2018 (17:46 IST)
ದಸರೆ ಈ ಬಾರಿ ರಾಜಮನೆತನಕ್ಕೆ ಬಹು ವಿಶೇಷವಾಗಿದೆ.
ಈ ಬಾರಿಯ ದಸರೆಗೆ ಯಧುವಂಶದ ಕುಡಿ ಸಾಕ್ಷಿಯಾಗಲಿದೆ. ಯಧುವೀರ್- ತ್ರಿಷಿಕಾ ದಂಪತಿ ಪುತ್ರ ಆದ್ಯವೀರ್‌ ನರಸಿಂಹರಾಜ ಒಡೆಯರ್ ದಸರಾದಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ.

9 ತಿಂಗಳಿನ ಆದ್ಯವೀರ್ ಗೆ ಇದು ಮೊದಲ ದಸರಾ ಆಗಿದೆ.  ಮೈಸೂರು ರಾಜಮನೆತನಕ್ಕೆ ಕಳೆದ 6 ದಶಕಗಳಿಂದ ಸಂತಾನ ಭಾಗ್ಯ ಇರಲಿಲ್ಲ. ಕಳೆದ ವರ್ಷ ಪ್ರಮೋದಾದೇವಿ ಒಡೆಯರ್ ಅವರ ದತ್ತುಪುತ್ರ ಯಧುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ಮತ್ತು ತ್ರಿಷಿಕಾ ದಂಪತಿಗೆ ಅದ್ಯವೀರ್ ಜನನದ ಮೂಲಕ ರಾಜಮನೆತನಕ್ಕೆ ಗಂಡು ಸಂತಾನ ಭಾಗ್ಯದ ಕೊರತೆ ನೀಗಿದೆ. ಇದರಿಂದ ರಾಜಮನೆತನದಲ್ಲಿ ಮನೆಮಾಡಿರುವ ಸಂತಸ ಎಲ್ಲರ ಖುಷಿಗೂ ಕಾರಣವಾಗಿದೆ.

ತಂದೆ ಯದುವೀರ್ ನಡೆಸಲಿರುವ ಖಾಸಗಿ ದರ್ಬಾರ್ ಗೆ ಸಾಕ್ಷಿಯಾಗಲಿರುವ ಅದ್ಯ ಯದುವೀರ್. ದಸರಾ ಗಜಪಡೆಗೆ ರಾಜಮನೆತನದ ವತಿಯಿಂದ ತಂದೆ ತಾಯಿ ನೀಡಿದ್ದ ಅತಿಥ್ಯಕ್ಕೆ ಸಾಕ್ಷಿಯಾಗಿದ್ದ ಆದ್ಯ ಯದುವೀರ್ ಪಾಲ್ಗೊಳ್ಳುವಿಕೆ ಈ ಬಾರಿ ಮೈಸೂರು ರಾಜಮನೆತನಕ್ಕೆ ವಿಶೇಷವಾಗಲಿದೆ.ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸಾಲಕ್ಕಾಗಿ ಮಹಿಳೆಯನ್ನ ಜೀತಕ್ಕೆ ಎಳದೊಯ್ದ ಪ್ರಕರಣ: ಆರೋಪಿಯನ್ನ ಬಿಡುವುದಿಲ್ಲ ಎಂದ ಆಯೋಗ