Publish Date: Thu, 20 Sep 2018 (19:49 IST)
Updated Date: Thu, 20 Sep 2018 (20:00 IST)
ಮೈಸೂರಿನ ಅರಮನೆ ಮುಂಭಾಗದಲ್ಲಿ ಗಜಪಡೆ ಫೋಟೋ ಶೂಟ್ ಭರ್ಜರಿಯಾಗಿ ನಡೆಯಿತು.
ಆನೆಗಳು ಕ್ಯಾಮೆರಕ್ಕೆ ವಿವಿಧ ಭಂಗಿಗಳಲ್ಲಿ ಪೋಸ್ ನೀಡಿದವು. ಸೊಂಡಲೆತ್ತಿ ಸಲ್ಯೂಟ್ ಮಾಡಿ ಪೋಟೋಗೆ ಪೋಸ್ ನೀಡಿದವು. ಮೈಸೂರು ಅರಮನೆ ಮುಂಭಾಗ ನಡೆದ ಪೋಟೋ ಶೂಟ್ ಇದಾಗಿತ್ತು. ಕೆ ಎಸ್ ಟಿ ಡಿ ಸಿ ಬ್ರೌಚರ್ ಗಾಗಿ ನಡೆದ ಪೋಟೋ ಶೂಟ್ನಲ್ಲಿ ಕರ್ನಾಟಕ ಪ್ರವಾಸಿ ತಾಣಗಳು ಹಾಗೂ ಕರ್ನಾಟಕ ಸಂಸ್ಕೃತಿ ಬಿಂಬಿಸುವ ಛಾಯಾಚಿತ್ರ ಬಳಸಿ ಬ್ರೌಚರ್ ತಯಾರಾಗುತ್ತಿದೆ.
ಇದಕ್ಕಾಗಿ ಮೊದಲ ಬಾರಿಗೆ ಅರಮನೆ ಮುಂದೆ ಗಜಪಡೆ ನಿಲ್ಲಿಸಿ ಪೋಟೋ ಶೂಟ್ ಮಾಡಲಾಗಿದೆ. ಪೋಟೋ ಶೂಟ್ ನಲ್ಲಿ ಪಾಲ್ಗೊಂಡ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ 6 ಆನೆಗಳು ಬಗೆ ಬಗೆ ಭಂಗಿಯಲ್ಲಿ ಪೋಸ್ ನೀಡಿದವು.
ಆನೆಗಳ ಮುಂದೆ ಮಾಡೆಲ್, ಯಕ್ಷಗಾನ ಕಲಾವಿದ, ಭರತ ನಾಟ್ಯ ಕಲಾವಿದರನ್ನ ನಿಲ್ಲಿಸಿ ನಡೆಸಲಾದ ಪೋಟೋ ಶೂಟ್ ಇದಾಗಿದೆ.
ಇಷ್ಟು ದಿನ ಅರಮನೆ ಮುಂದೆ ಜೋಡಿಗಳು, ವೆಡಿಂಗ್ ಶೂಟ್ ಮಾಡಿಸಿಕೊಳ್ಳುತ್ತಿದ್ದರು. ಇದೀಗಾ ದಸರಾ ಗಜಪಡೆಯು ಪೋಟೋ ಶೂಟ್ ನಲ್ಲಿ ಭಾಗಿಯಾಗಿ ಗಮನ ಸೆಳೆದವು.