Publish Date: Thu, 20 Sep 2018 (19:47 IST)
Updated Date: Thu, 20 Sep 2018 (20:04 IST)
ಮಲೆನಾಡಿನಲ್ಲಿ ಹೈಟೆಕ್ ಗೋಮಾಂಸ ದಂಧೆ ಜಾಲ ಪತ್ತೆಯಾಗಿದೆ.
ಅಕ್ರಮವಾಗಿ ಗೋವುಗಳನ್ನ ಕಡಿದು ಮಾಂಸ ಮಾರಾಟ ಮಾಡುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಅಣಜೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ನಿರ್ಜನ ಪ್ರದೇಶದಲ್ಲಿ ಶೆಡ್ ನಿರ್ಮಿಸಿ ಗೋಮಾಂಸವನ್ನು ದಂಧೆಕೋರರು ಮಾರಾಟ ಮಾಡುತ್ತಿದ್ದರು.
ದಾಳಿ ಸಂದರ್ಭದಲ್ಲಿ ಆರೋಪಿ ಇಮ್ರಾನ್ ಹಾಗೂ ಹ್ಯಾರಿಸ್ ಬಂಧನವಾಗಿದೆ. ಹತ್ತಾರು ಗುಂಡಿಗಳಲ್ಲಿ ಹಸುಗಳ ಕಾಲು, ಚರ್ಮವನ್ನು ದಂಧೆಕೋರರು ಹೂತು ಇಟ್ಟಿದ್ದರು. ಕಾಣೆಯಾದ ಗೋವುಗಳನ್ನ ಹುಡುಕಲು ಸ್ಥಳೀಯರು ಹೋದಾಗ ಗೋವುಗಳ ಅಸ್ಥಿ ಪತ್ತೆಯಾಗಿದೆ. ನೂರಾರು ಗೋವುಗಳ ತಲೆ, ಕಾಲುಗಳ ಅಸ್ಥಿ ಪತ್ತೆಯಾಗಿವೆ.
ರಾತ್ರೋರಾತ್ರಿ ಗೋವುಗಳನ್ನ ಕದ್ದಿಯುತ್ತಿದ್ದ ಹೈಟೆಕ್ ದಂಧೆಕೋರರು ಗೋಮಾಂಸ ದಂಧೆಯನ್ನು ಜಾಲವನ್ನಾಗಿ ಬೆಳೆಸಿದ್ದಾರೆ. ಈ ಕುರಿತು ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.