Publish Date: Sat, 15 Sep 2018 (14:00 IST)
Updated Date: Sat, 15 Sep 2018 (14:03 IST)
ಮನೆಯವರು ಸಾರ್ವಜನಿಕ ಗಣೇಶನ ಪೂಜೆಗೆ ತೆರಳಿದ್ದ ಸಂದರ್ಭದಲ್ಲಿ ಹಾಡುಹಗಲೇ ಮನೆಗೆ ಒಳ ನುಗ್ಗಿದ ಕಳ್ಳರು ನಗದು, ಚಿನ್ನಾಭರಣ ದೋಚಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಜಾಲಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಮನೆಯವರು ಸಾರ್ವಜನಿಕ ಗಣೇಶನ ಪೂಜೆಗೆ ತೆರಳಿದ್ದ ಸಂದರ್ಭದಲ್ಲಿ ಹಾಡುಹಗಲೇ ಮನೆಗೆ ಒಳ ನುಗ್ಗಿದ ಕಳ್ಳರು ಕಪಾಟಿನಲ್ಲಿದ್ದ ನಗದು ಹಾಗೂ ಚಿನ್ನಾಭರಣಗಳನ್ನು ದೋಚಿ ಪರಾರಿಯಾದ ಘಟನೆ ನಡೆದಿದೆ.
ಭಟ್ಕಳ ತಾಲೂಕಿನ ಹೆಬ್ಳೆ ಗ್ರಾಮ ಪಂಚಾಯತಿ ಕಾರ್ಯದರ್ಶಿ ಲಿಂಗಪ್ಪ ನಾಯ್ಕ ಎಂಬುವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಮನೆಯ ಹಿಂಬದಿಯ ಬಾಗಿಲನ್ನು ಭದ್ರವಾಗಿ ಹಾಕದೇ ಇದ್ದುದರಿಂದ ಯಾರೋ ಇದನ್ನು ಗಮನಿಸಿದ ಕಳ್ಳರು ಒಳಗೆ ನುಗ್ಗಿ 20 ಸಾವಿರ ನಗದು ಹಾಗೂ 10 ಗ್ರಾಮ್ ಉಂಗುರ, ಸರ, ಬಳೆ ಸೇರಿದಂತೆ 2 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನದ ಆಭರಣ ದೋಚಲಾಗಿದೆ. ಸ್ಥಳಕ್ಕೆ ಪೊಲೀಸರು ಶ್ವಾನ ದಳದೊಂದಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಭಟ್ಕಳ ಸಿಪಿಐ ಕೆ.ಎಲ್.ಗಣೇಶ ತನಿಖೆ ಕೈಗೊಂಡಿದ್ದಾರೆ.