Select Your Language

Notifications

webdunia
webdunia
webdunia
webdunia

ಸ್ವಂತ ಮಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ವೈದ್ಯ ಅರೆಸ್ಟ್

ಸ್ವಂತ ಮಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ವೈದ್ಯ ಅರೆಸ್ಟ್
ಮೈಸೂರು , ಭಾನುವಾರ, 16 ಸೆಪ್ಟಂಬರ್ 2018 (06:56 IST)
ಮೈಸೂರು : ತಾನೇ ಜನ್ಮ ನೀಡಿದ ಮಗಳಿಗೆ ಕಳೆದ ಏಳು ವರ್ಷಗಳಿಂದ ನಿರಂತರವಾಗಿ  ಲೈಂಗಿಕ ಕಿರುಕುಳ ನೀಡುತ್ತಿದ್ದ ವೈದ್ಯಕೀಯ ಅಧೀಕ್ಷಕ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.


ಆರೋಪಿ ಡಾ.ಇಮ್ತಿಯಾಜ್ ಅಹಮದ್ ಖಾನ್(58) ಎಂಬುದಾಗಿ ತಿಳಿದುಬಂದಿದ್ದು, ಇತ ಉದಯಗಿರಿಯ ಮಂಡ್ಯ ಜಿಲ್ಲೆಯ ಇ.ಎಸ್.ಐ.ಆಸ್ಪತ್ರೆಯಲ್ಲಿ ವೈದ್ಯಕೀಯ ಅಧೀಕ್ಷಕನಾಗಿದ್ದ. ಇತ ಸ್ವಂತ ಮಗಳಿಗೇ ಕಳೆದ 7 ವರ್ಷಗಳಿಂದ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದ್ದು, ಲೈಂಗಿಕ ಕಿರುಕುಳಕ್ಕೆ ಅಡ್ಡಿಯಾದ ಪತ್ನಿ ತಬಸಮ್ ಮೇಲೆಯೂ ವೈದ್ಯ ಹಲ್ಲೆ  ಮಾಡಿದ್ದಾನೆ ಎನ್ನಲಾಗಿದೆ. 


ಈ ಕುರಿತು ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದೀಗ ಆರೋಪಿ ಡಾ.ಇಮ್ತಿಯಾಜ್ ಅಹಮದ್ ಖಾನ್​​​ನನ್ನ ಬಂಧಿಸಿದ ಪೊಲೀಸರು  ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕಂಬಳಕ್ಕೆ ಮತ್ತೆ ಅಡ್ಡಿ?