Select Your Language

Notifications

webdunia
webdunia
webdunia
webdunia

ರಮ್ಯಾ ವಿರುದ್ಧ ಬಿಜೆಪಿ ಕಾರ್ಯಕರ್ತನ ಚಳವಳಿ

ರಮ್ಯಾ ವಿರುದ್ಧ ಬಿಜೆಪಿ ಕಾರ್ಯಕರ್ತನ ಚಳವಳಿ
ಮಂಡ್ಯ , ಶನಿವಾರ, 1 ಸೆಪ್ಟಂಬರ್ 2018 (19:32 IST)
ಬಿಜೆಪಿ ಕಾರ್ಯಕರ್ತನಿಂದ ಮಾಜಿ ಸಂಸದೆ ರಮ್ಯಾ ವಿರುದ್ಧ ಚಳುವಳಿ ಆರಂಭಗೊಂಡಿದೆ.
ಸಾಮಾಜಿಕ ಜಾಲತಾಣದಲ್ಲಿ ರಮ್ಯಾ ವಿರುದ್ಧ ಚಳುವಳಿ ಆರಂಭಿಸಿದ ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಆರಾಧ್ಯ. ಇವರು ಮಂಡ್ಯದ ಉಪ್ಪರಕನಹಳ್ಳಿ ಗ್ರಾಮದ ನಿವಾಸಿಯಾಗಿದ್ದಾರೆ.

ವಿಧಾನಸಭೆ ಮತ್ತು ಮಂಡ್ಯ ನಗರಸಭೆ ಚುನಾವಣೆಯಲ್ಲಿ ಮತದಾನ ಮಾಡದ ರಮ್ಯಾ ಅವರಿಗೆ ಯಾರೂ ಮತಹಾಕಬೇಡಿ ಎಂದು ಚಳುವಳಿ ಆರಂಭಿಸಿದ್ದಾರೆ. ರಮ್ಯಾ ಮುಂದಿನ ಲೋಕಸಭೆ ಚುನಾವಣೆಗೆ ಅಭ್ಯರ್ಥಿ ಆಗಬಾರದು. ಮತ ಚಲಾಯಿಸದ ರಮ್ಯಾ ಅವರಿಗೆ ಯಾರೂ ಮತ ಹಾಕಬಾರದು ಎಂದು ವಾಟ್ಸಪ್ ಚಳುವಳಿಯನ್ನು  ಬಿಜೆಪಿ ಕಾರ್ಯಕರ್ತ ಆರಂಭಿಸಿದ್ದಾರೆ.

ರಮ್ಯಾ ವಿರುದ್ಧ ಆಕ್ರೋಶ ಹೊರಹಾಕಿ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಯಬಿಟ್ಟಿರುವ ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಆರಾಧ್ಯನ ಪೋಸ್ಟ್ ಗೆ ಪರ ವಿರೋಧ ಚರ್ಚೆಗಳು ಆರಂಭಗೊಂಡಿವೆ.



Share this Story:

Follow Webdunia kannada

ಮುಂದಿನ ಸುದ್ದಿ

ಮೀನು ಉದ್ಯಮಕ್ಕೆ ಹೊಡೆತ ನೀಡಿದ ಮಹಾಮಳೆ!