Select Your Language

Notifications

webdunia
webdunia
webdunia
webdunia

ಮತದಾನ ಮಾಡದ ರಮ್ಯಾ

ಮತದಾನ ಮಾಡದ ರಮ್ಯಾ
ಮಂಡ್ಯ , ಶುಕ್ರವಾರ, 31 ಆಗಸ್ಟ್ 2018 (18:53 IST)
ಎಐಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ಮತ್ತು ಖ್ಯಾತ ಚಿತ್ರನಟಿ, ಕಾಂಗ್ರೆಸ್ ಪಕ್ಷದ ಪರ ಟ್ವಿಟ್ಟರ್ ನಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಟ್ವೀಟ್ ಗಳನ್ನ ಮಾಡೋರು. ಆದ್ರೆ ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರ ಹಕ್ಕಾದ ಮತದಾನ ಮಾಡೋದಿಕ್ಕೆ ಮಾತ್ರ ಇವ್ರು ಬರೋದೆ ಇಲ್ಲ.  ಮಾಜಿ ಸಂಸದೆ ರಮ್ಯಾ ಇಂದು ನಡೆದ ಸ್ಥಳೀಯ ಸಂಸ್ಥೆ. ಚುನಾವಣೆಯಲ್ಲಿ ತಮ್ಮ ಓಟ್ ಇದ್ರೂ ಮತದಾನ ಮಾಡಿಲ್ಲ.  

ರಮ್ಯಾ ಮಂಡ್ಯ ಕ್ಷೇತ್ರದಿಂದ ಒಮ್ಮೆ ಸಂಸದರಾಗಿದ್ದವರು. ಇವತ್ತು ರಾಜಾದ್ಯಂತ ಸ್ಥಳೀಯ ಸಂಸ್ಥೆಗೆ ಭರ್ಜರಿಯಾಗಿ ಚುನಾವಣೆ ನಡೆಯುತ್ತಿದೆ. ರಮ್ಯಾ ಅವ್ರ ಮತ ಮಂಡ್ಯದ 11 ವಾರ್ಡ್ನ ಬೂತ್ ಸಂಖ್ಯೆ 35ರಲ್ಲಿದೆ. 671 ರಮ್ಯಾ ಅವ್ರ ಮತ ಸಂಖ್ಯೆ. ತಮ್ಮ ಮತ ಮಂಡ್ಯದಲ್ಲಿ ಇದ್ರೂ ಸಹ ಮಂಡ್ಯ ನಗರಸಭೆ ಚುನಾವಣೆಗೆ ಮತದಾನ ಮಾಡಲು ರಮ್ಯಾ ಬಂದಿಲ್ಲ. ಕಳೆದ ಮೇ ತಿಂಗಳಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲೂ ಸಹ ರಮ್ಯಾ ಓಟಿಂಗ್ ಮಾಡಿಲ್ಲ. ಈಗ್ಲೂ ಸಹ ರಮ್ಯಾ ಓಟಿಂಗ್ ಮಾಡಿಲ್ಲ. ಮತದಾನದ ತಮ್ಮ ಕರ್ತವ್ಯ ಮರೆತಿರುವ ರಮ್ಯಾ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗಳು ಕೇಳಿಬರುತ್ತಿವೆ.



 

Share this Story:

Follow Webdunia kannada

ಮುಂದಿನ ಸುದ್ದಿ

ಮತ ಚಲಾಯಿಸಿದ ಜಿಲ್ಲಾಧಿಕಾರಿ