Publish Date: Fri, 31 Aug 2018 (11:00 IST)
Updated Date: Fri, 31 Aug 2018 (11:01 IST)
ಬೆಂಗಳೂರು: ನಟಿ, ಮಾಜಿ ಸಂಸದೆ ರಮ್ಯಾ ಮತ್ತು ನಟ, ಬಿಜೆಪಿ ನಾಯಕ ಜಗ್ಗೇಶ್ ನಡುವೆ ನೀರ್ ದೋಸೆ ಸಿನಿಮಾದಿಂದ ಹುಟ್ಟಿಕೊಂಡ ವೈಮನಸ್ಯ ಈಗ ತಮ್ಮ ತಮ್ಮ ಪಕ್ಷಗಳ ವಿಚಾರದಲ್ಲಿ ಮುಂದುವರಿಯುತ್ತಲೇ ಇರುತ್ತದೆ.
ಈ ಬಾರಿ ಆರ್ ಎಸ್ ಎಸ್ ಸಂಘಟನೆ ಬಗ್ಗೆ ಕೇರಳ ಪ್ರವಾಹ ವಿಚಾರದಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂದು ಕಾಂಗ್ರೆಸ್ ನ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆಯೂ ಆಗಿರುವ ರಮ್ಯಾ ವಿರುದ್ಧ ಜಗ್ಗೇಶ್ ಗರಂ ಆಗಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಜಗ್ಗೇಶ್ ರಮ್ಯಾ ಹೆಸರು ಹೇಳದೇ ಟಾಂಗ್ ಕೊಟ್ಟಿದ್ದಾರೆ. ‘ಯಾರಿಗೆ ವಸ್ತುಸ್ಥಿತಿ ಅನುಭವದ ಕೊರತೆ ಅಂಥವರು ಬೇಜವಾಬ್ಧಾರಿಯ ಹೇಳಿಕೆ ಕೊಡುತ್ತಾರೆ. ಕೇರಳ ಕೊಡಗಿನ ಮಳೆ ಅವಾಂತರಕ್ಕೆ ಭುಜಕೊಟ್ಟಿದ್ದು ಆರ್ ಎಸ್ಎಸ್ ವಿನಹ ಇಂಥಹ ಬಾಲಿಶ ಹೇಳಿಕೆ ಕೊಡುವವರಲ್ಲ! ಅಂದೆ ನೆಹರು ಆರ್ ಎಸ್ಎಸ್ ಕಾರ್ಯವೈಖರಿ ಮೆಚ್ಚಿ ಹೊಗಳಿದ್ದರು. ಓದಲು ಬಂದರೆ ಇತಿಹಾಸ ಪುಟ ತಿರುಗಿಸಿ ಓದಲು ಹೇಳಿ! ಆಗಲು ತಿಳಿಯದಿದ್ದರೆ ಕ್ಯಾಚ್ ಆಫೀಸರ್ ಕೆಲಸ ಕಂಟಿನ್ಯೂ ಮಾಡಿ’ ಎಂದು ರಮ್ಯಾಗೆ ಜಗ್ಗೇಶ್ ತಿರುಗೇಟು ಕೊಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.