Publish Date: Fri, 31 Aug 2018 (08:40 IST)
Updated Date: Fri, 31 Aug 2018 (08:42 IST)
ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಹುಬ್ಬಳ್ಳಿಗೆ ಬಂದಿದ್ದಾಗ ರಾಹುಲ್ ಗಾಂಧಿ ವಿಮಾನದಲ್ಲಿ ತಾಂತ್ರಿಕ ದೋಷ ಸಂಭವಿಸಿದ ಪ್ರಕರಣ ಗೊತ್ತಿರಬಹುದು.
ಆವತ್ತು ಏನಾದರೂ ವಿಮಾನ ಲ್ಯಾಂಡ್ ಆಗಲು ಇನ್ನೂ 20 ಸೆಕೆಂಡು ತಡವಾಗಿದ್ದರೆ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು ಎಂಬ ಅಂಶ ಇದೀಗ ಬಯಲಾಗಿದೆ.
ಆವತ್ತು ರಾಹುಲ್ ಪ್ರಯಾಣಿಸುತ್ತಿದ್ದ ವಿಮಾನ ಹುಬ್ಬಳ‍್ಳಿಯಲ್ಲಿ ಲ್ಯಾಂಡ್ ಆಗುವ ಮೊದಲು 8000 ಅಡಿ ಎತ್ತರದಲ್ಲಿ ವಿಪರೀತ ಶಬ್ಧ ಮಾಡುತ್ತಾ ಅಲುಗಾಡಿತ್ತು. ಆದರೆ ಆಗ ವಿಮಾನದಲ್ಲಿ ಸ್ವಯಂಚಾಲಿತ ವ್ಯವಸ್ಥೆ ಚಾಲನೆಯಲ್ಲಿತ್ತು. ಹೀಗಾಗಿ ಪೈಲಟ್ ಹೇಗೋ ಮಾಡಿ ಮೂರನೇ ಪ್ರಯತ್ನದಲ್ಲಿ ಸುರಕ್ಷಿತವಾಗಿ ವಿಮಾನ ಲ್ಯಾಂಡಿಂಗ್ ಮಾಡಿದ್ದರು. ಒಂದು ವೇಳೆ ಇನ್ನೂ ಕೊಂಚ ತಡವಾಗಿದ್ದರೂ ರಾಹುಲ್ ಜೀವಕ್ಕೇ ಅಪಾಯವಾಗುತ್ತಿತ್ತು ಎಂಬ ಅಂಶ ಇದೀಗ ಬಯಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.