Select Your Language

Notifications

webdunia
webdunia
webdunia
webdunia

ಕಳುವಾಗಿದ್ದ ಮಗು ತಮಿಳುನಾಡಿನಲ್ಲಿ ಪತ್ತೆ

Tamil Nadu
ಕೋಲಾರ ನಗರದ SNR ಜಿಲ್ಲಾಸತ್ರೆಯಿಂದ ಗುರುವಾರ ಸಂಜೆ ಮಹಿಳೆಯರು ಅಪಹರಿಸಿದ್ದ ಶಿಶುವನ್ನು ತಮಿಳುನಾಡಿನಲ್ಲಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಮೂವರು ಮಹಿಳೆಯರು ನವಜಾತ ಗಂಡು ಶಿಶುವನ್ನು ಬ್ಯಾಗ್‌ನಲ್ಲಿ ಇಟ್ಟುಕೊಂಡು ಆಟೊದಲ್ಲಿ ಪರಾರಿಯಾದ ದೃಶ್ಯ CCTV ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
 
ಈ ಸುಳಿವಿನ ಮೇಲೆ ಕಾರ್ಯಾಚರಣೆ ಕೈಗೊಂಡ ಕೋಲಾರ ವಿಭಾಗದ ಡಿವೈಎಸ್ಪಿ ಮಲ್ಲೇಶ್ ನೇತೃತ್ವದ ತಂಡ ಆರೋಪಿಗಳನ್ನು ಕೇವಲ 6 ಗಂಟೆಗಳೊಳಗೆ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ. ಇನ್ಸ್​​ಪೆಕ್ಟರ್‌ಗಳಾದ ಹರೀಶ್​​, ವಸಂತ್‌, ಶಂಕರಾಚಾರ್ಯ, ತಾಂತ್ರಿಕ ತಜ್ಞ ನಾಗರಾಜ್ ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ತಿಳಿಸಿದರು. ಮಾಲೂರು ಪಟ್ಟಣದ ಪಟೇಲರ ಬೀದಿ ನಿವಾಸಿ ನಂದಿನಿ ಹಾಗೂ ಪೂವರಸನ್ ಎಂಬ ದಂಪತಿಗೆ ಸೇರಿದ ಆರು ದಿನಗಳ ಶಿಶು ಇದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಂದಿ ಗಿರಿಧಾಮಕ್ಕೆ ಸಚಿವ ಸುಧಾಕರ್ ಭೇಟಿ