Select Your Language

Notifications

webdunia
webdunia
webdunia
webdunia

ಫ್ಯಾಶನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಪುತ್ರನ ರಂಪಾಟ

Fashion designer
bangalore , ಶುಕ್ರವಾರ, 27 ಅಕ್ಟೋಬರ್ 2023 (10:00 IST)
ಮೊನ್ನೆ ರಾತ್ರಿ ಯಲಹಂಕದ ರಸ್ತೆಯಲ್ಲಿ ಕಂಠಪೂರ್ತಿ ಕುಡಿದು ಆ್ಯಡಂ ಬಿದ್ದಪ್ಪ ಲ್ಯಾಷ್ ಡ್ರೈವ್ ಮಾಡಿದ್ದಾನೆ. ಈ ವೇಳೆ ಹಿಂದೆಯಿಂದ ರಾಹುಲ್ ಎಂಬಾತ ಹಾರನ್ ಮಾಡಿದ್ದಾರೆ. ಅಷ್ಟಕ್ಕೆ ಕಾರ್ ಓವರ್ ಟೇಕ್ ಮಾಡಿ ಕಾ‌ನ ಬ್ಲಾಕ್ ಮಾಡಿ ಆ್ಯಡಂ ಗಲಾಟೆ ಮಾಡಿದ್ದಾನೆ. ಕೂಡಲೇ ರಾಹುಲ್ ಪೊಲೀಸ್ ಎಮರ್ಜೆನ್ಸಿ ಸಂಖ್ಯೆ 112ಗೆ ಕರೆ ಮಾಡಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರ ಜೊತೆ ಸಹ ಅಡಂ ಬಿದ್ದಪ್ಪ ಕೂಗಾಟ ಮಾಡಿ ಪುಂಡಾಟ ತೋರಿದ್ದಾನೆ.
 
ಸ್ಥಳಕ್ಕೆ ಬಂದ ಯಲಹಂಕ ಸಂಚಾರಿ ಪೊಲೀಸರು ಆ್ಯಡಂ ಪರಿಶೀಲಿಸಿದಾಗ ಕಂಠ ಕುಡಿದಿರುವುದು ಪತ್ತೆಯಾಗಿದೆ. ಈ ವೇಳೆ ಆತನ ಕಾರ್ ಸೀಜ್ ಮಾಡಿದ್ದಾರೆ. ಬಳಿಕ ಆಡಂ ಬಿದ್ದಪ್ಪನನ್ನು ವಶಕ್ಕೆ ಪಡೆದಿದ್ದಾರೆ. ಮತ್ತೊಂದೆಡೆ ರಾಹುಲ್ ದೂರಿನ ಹಿನ್ನಲೆ ಯಲಹಂಕ ನ್ಯೂಟೌನ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ. ಬಳಿಕ ಆ್ಯಡಂ ವಶಕ್ಕೆ ಪಡೆದು ಮೆಡಿಕಲ್ ಮಾಡಿಸಿದಾಗ ಸಹ ಮದ್ಯ ಸೇವಿಸಿರುವುದು ಕನ್ನರ್ಮ್ ಆಗಿದೆ. ಸದ್ಯ ಸ್ಟೇಷನ್ ಬೇಲ್ ಮೇಲೆ ಆ್ಯಡಂ ನ ಪೊಲೀಸು ಬಿಟ್ಟು ಕಳುಹಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಮನ ಹೆಸರಿದ್ದರೆ ಕಾಂಗ್ರೆಸ್ಸಿಗರಿಗೆ ಅಲರ್ಜಿನಾ- ಸಿ.ಪಿ.ಯೋಗೇಶ್ವರ್