Publish Date: Fri, 27 Oct 2023 (17:00 IST)
Updated Date: Fri, 27 Oct 2023 (17:20 IST)
ಕಳ್ಳರು ಬರೋಬ್ಬರಿ 1,037 ಮೊಬೈಲ್ ಫೋನ್ಗಳನ್ನ ಕದ್ದು ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಗೋರಿಪಾಳ್ಯದ ಕುಖ್ಯಾತ ಮೊಬೈಲ್ ಕಳ್ಳರು ಬನ್ನೇರುಘಟ್ಟ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಐಫೋನ್, ರಿಯಲ್ ಮೀ, ಒನ್ ಪ್ಲಸ್ ,ಒಪ್ಪೋ ಸೇರಿದಂತೆ ವಿವಿಧ ಬ್ರ್ಯಾಂಡ್ನ ಮೊಬೈಲ್ಗಳನ್ನ ವಶಪಡಿಸಿಕೊಂಡಿದ್ದಾರೆ.
ಕಳ್ಳರು ಬಸ್ಗಳಲ್ಲಿ, ರಸ್ತೆಯಲ್ಲಿ ನಡೆದು ಹೋಗ್ತಿದ್ದವರಿಂದ ಮೊಬೈಲ್ ಕಸಿಯುತ್ತಿದ್ರು. ಕದ್ದ ಮೊಬೈಲ್ಗಳನ್ನ AMC ಕಾಲೇಜು ವಿಧ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ರು. ಪೊಲೀಸರಿಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ್ದಾರೆ. ತನಿಖೆ ವೇಳೆ ಸಿಕ್ಕ ಮಾಹಿತಿ ಮೇರೆಗೆ ನಾಲ್ವರು ಮೊಬೈಲ್ ಕಳ್ಳರನ್ನ ಬಂಧಿಸಲಾಗಿದೆ. ಗೋರಿಪಾಳ್ಯದ ಮಹಮ್ಮದ್ ಮಮೂದ್ ಪಾಷಾ, ಮಹಮ್ಮದ್ ಉಮರ್, ಮಹಮ್ಮದ್ ಉಮರ್ ಹಾಗೂ ಐಯಾನ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 50 ಲಕ್ಷ ಮೌಲ್ಯದ ಮೊಬೈಲ್ಗಳನ್ನ ವಶಕ್ಕೆ ಪಡೆಯಲಾಗಿದೆ