Select Your Language

Notifications

webdunia
webdunia
webdunia
webdunia

ಸಂಪುಟ ವಿಸ್ತರಣೆಯಾದ ದಿನವೇ ರಾಜ್ಯ ಸರ್ಕಾರ ಪತನ!

ಕೆಎಸ್ ಈಶ್ವರಪ್ಪ
ಹುಬ್ಬಳ್ಳಿ , ಶುಕ್ರವಾರ, 30 ನವೆಂಬರ್ 2018 (10:17 IST)
ಹುಬ್ಬಳ್ಳಿ: ಸದ್ಯದಲ್ಲೇ ರಾಜ್ಯದ ಸಮ್ಮಿಶ್ರ ಸರ್ಕಾರದ ಸಂಪುಟ ವಿಸ್ತರಣೆಯಾಗಲಿದೆ. ಸಂಪುಟ ವಿಸ್ತರಣೆಯಾದ ಬೆನ್ನಲ್ಲೇ ರಾಜ್ಯ ಸರ್ಕಾರ ಪತನವಾಗಲಿದೆ ಎಂದು ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ.


ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಸಂಪುಟ ವಿಸ್ತರಣೆಯಾದ ದಿನವೇ ಅವರೇ ಎರಡೂ ಪಕ್ಷದವರು ಪರಸ್ಪರ ಕಚ್ಚಾಡಿಕೊಂಡೇ ಸರ್ಕಾರ ಉರುಳಿಸಲಿದ್ದಾರೆ. ಅದಕ್ಕೆ ಬಿಜೆಪಿ ಏನೂ ಮಾಡಬೇಕಾಗಿಲ್ಲ’ ಎಂದು ಲೇವಡಿ ಮಾಡಿದ್ದಾರೆ.

‘ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೋ ಎಂಬುದೇ ಅನುಮಾನ. ಹಿಂದೆ ಜೆಡಿಎಸ್ ನವರೇ ಸಿದ್ದರಾಮಯ್ಯನವರನ್ನು ಹೀನಾಯವಾಗಿ ಸೋಲಿಸಿದ್ರು. ಈಗ ಅದೇ ಜೆಡಿಎಸ್ ನವರ ಜತೆ ಸೇರಿಕೊಂಡು ಅಧಿಕಾರಕ್ಕಾಗಿ ಆಸೆ ಪಟ್ಟು ಸರ್ಕಾರ ರಚಿಸಿದ್ದಾರೆ’ ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಿಚ್ಛೇದನ ಅರ್ಜಿ ಹಿಂಪಡೆದು ಅಚ್ಚರಿ ಮೂಡಿಸಿದ ಲಾಲೂ ಯಾದವ್ ಪುತ್ರ