Select Your Language

Notifications

webdunia
webdunia
webdunia
webdunia

SDA, FDA ಹುದ್ದೆ ಹೆಚ್ಚಿಸಿದ ಕೆಪಿಎಸ್ ಸಿ

SDA, FDA ಹುದ್ದೆ ಹೆಚ್ಚಿಸಿದ ಕೆಪಿಎಸ್ ಸಿ
ಬೆಂಗಳೂರು , ಬುಧವಾರ, 12 ಫೆಬ್ರವರಿ 2020 (15:13 IST)

ಉದ್ಯೋಗಾಕಾಂಕ್ಷಿಗಳಿಗೆ ಶುಭ ಸುದ್ದಿ ಬಂದಿದೆ.ಕರ್ನಾಟಕ ಲೋಕಸೇವಾ ಆಯೋಗದ ವತಿಯಿಂದ ಸಹಾಯಕರು, ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಗೆ ಜನವರಿ 31ರಂದು ಅಧಿಸೂಚನೆ ಹೊರಡಿಸಲಾಗಿದೆ. ಅದಕ್ಕೆ ಇದೀಗ 24 ಹುದ್ದೆಗಳನ್ನು ಹೊಸದಾಗಿ ಸೇರಿಸಲಾಗಿದೆ.
 

ಮೊದಲ ಅಧಿಸೂಚನೆಯಲ್ಲಿ ಉಳಿಕೆ ಮೂಲದ 975 ಮತ್ತು ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ 137 ಹುದ್ದೆಗಳು ಸೇರಿದ್ದವು. ಒಟ್ಟು 1112 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಈಗ ವಿವಿಧ ಇಲಾಖೆಗಳ 24 ಹುದ್ದೆಗಳನ್ನು ಸೇರ್ಪಡೆ ಮಾಡಲಾಗಿದೆ. ಹೀಗಾಗಿ ಹುದ್ದೆಗಳ ಸಂಖ್ಯೆ 1136 ಕ್ಕೆ ಏರಿಕೆಯಾಗಿದೆ.

ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಮಾರ್ಚ್ 6 ಕೊನೆಯ ದಿನವಾಗಿದೆ. ಮಾರ್ಚ್ 7 ಶುಲ್ಕ ಪಾವತಿಗೆ ಕೊನೆಯ ದಿನವಾಗಿದೆ. ಮಾಹಿತಿಗಾಗಿ ಲೋಕಸೇವಾ ಆಯೋಗದ ವೆಬ್ ಸೈಟ್ ಗಮನಿಸಬಹುದಾಗಿದೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಓಡಿಹೋಗಿ ಮದುವೆಯಾದ ಮಗಳು : ತಂದೆ-ತಾಯಿ, ಸಹೋದರ ಆತ್ಮಹತ್ಯೆ