Select Your Language

Notifications

webdunia
webdunia
webdunia
webdunia

ಕೆಲಸ ಮಾಡ್ತಿದ್ದ ಮಹಿಳೆಯರಿಗೆ ಒಬ್ಬೊಬ್ಬರಾಗಿ ಮನೆಗೆ ಬಾ ಅಂತ ಕರೆಯುತ್ತಿದ್ದ ಕಾಮುಕ ಅಧಿಕಾರಿ?

ಮಹಿಳೆಯರು
ಕೆಲಸ ಮಾಡುತ್ತಿದ್ದ ಮಹಿಳೆಯರಿಗೆ ಒಬ್ಬೊಬ್ಬರಾಗಿ ಮನೆಗೆ ಬರುವಂತೆ ಕರೆಯುತ್ತಿದ್ದ ಅಧಿಕಾರಿ ಮಹಿಳೆಯರ ಮೈಕೈ ಮುಟ್ಟಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.

ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕನ ಮೇಲೆ ಲೈಂಗಿಕ ಕಿರುಕುಳದ ಆರೋಪ ಕೇಳಿಬಂದಿದೆ.
ಬೀದರ್ ನ ಎಮ್ ಎಸ್ ಪಿ ಸಿ ಸಂಸ್ಥೆಯಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಅಧಿಕಾರಿಯಿಂದ  ಲೈಂಗಿಕ ಕಿರುಕುಳ ಆರೋಪ ಕೊಡುತ್ತಿದ್ದಾನಂತೆ.

ಮೈ ಕೈ ಮುಟ್ಟಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಉಪ ನಿರ್ದೇಶಕ ಮಂಜುನಾಥ, ಒಬ್ಬ ಒಬ್ಬರಾಗಿ ಮನೆಗೆ ಬರುವಂತೆ ಮಹಿಳೆಯರಿಗೆ ಒತ್ತಡ ಹಾಕುತ್ತಿದ್ದನಂತೆ. ಅಂಗನವಾಡಿ ಕೇಂದ್ರಗಳಿಗೆ ಆಹಾರ ಪೂರೈಕೆ ಮಾಡುತಿದ್ದ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದಾನೆ ಎನ್ನಲಾಗಿದೆ.

ಮನೆಗೆ ಕರೆಸಿ ಮಹಿಳೆಯರಿಗೆ  ಅನುಚಿತವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಾಮುಕ ಅಧಿಕಾರಿ ವಿರುದ್ಧ ಈಗ ಮಹಿಳೆಯರು ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ಅಧಿಕಾರಿ ವಿರುದ್ಧ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮಹಿಳೆಯರು ಪತ್ರ ಬರೆದಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಇಡ್ಲಿ ತಿಂದ ಬಿಲ್ ಕೇಳಿದ್ದಕ್ಕೆ ರೌಡಿಶೀಟರ್ ಮಾಡಿದ್ದೇನು ಗೊತ್ತಾ? ಶಾಕಿಂಗ್!